• Slide
    Slide
    Slide
    previous arrow
    next arrow
  • ವೇತನ ತಾರತಮ್ಯ: ನ್ಯಾಯಕ್ಕಾಗಿ ಶಿಕ್ಷಕಿಯ ಮನವಿ

    300x250 AD

    ದಾಂಡೇಲಿ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಎಂ.ಜಿ.ಎಂ.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 29 ವರ್ಷಗಳಿಂದ ಸೇವೆ ಸಲ್ಲಿಸಿದರೂ ವೇತನದಲ್ಲಿ ತಾರತಮ್ಯ ಮಾಡಿ, ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದಾಗಿ ನಗರದ ಟೌನ್‌ಶಿಪ್ ನಿವಾಸಿ ಮಹಾದೇವಿ ಪರಮಂಜಿ ಅಳಲು ತೋಡಿಕೊಂಡಿದ್ದಾರೆ.

    ಈ ಶಾಲೆಯಲ್ಲಿ 29 ವರ್ಷಗಳವರೆಗೆ ಸೇವೆ ಸಲ್ಲಿಸಿ, ತನಗಿಂತ ಆನಂತರ ಕೆಲಸಕ್ಕೆ ಸೇರ್ಪಡೆಗೊಂಡ ಶಿಕ್ಷಕಿಯರಿಗೆ 20 ಸಾವಿರ ಕ್ಕೂ ಅಧಿಕ ವೇತನ, ಮನೆ ಬಾಡಿಗೆ ಇನ್ನಿತರ ಸೌಕರ್ಯಗಳನ್ನು ನೀಡಲಾಗಿದ್ದರೂ, ನನಗೆ ಮಾತ್ರ 9,100 ರೂ. ವೇತನ ನೀಡುತ್ತಿರುವುದನ್ನು ಪ್ರಶ್ನಿಸಿರುವುದಕ್ಕೆ ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಮೊದಲೇ ಅವಿವಾಹಿತಳಾಗಿರುವ ನನಗೆ ಬದುಕು ದುಸ್ತರವಾಗಿದೆ. ನನ್ನ ಸೇವೆಗೆ ಅನುಗುಣವಾಗಿ ನ್ಯಾಯ ದೊರಕಿಸಿಕೊಡಬೇಕೆಂದು ಅವರು ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top