Slide
Slide
Slide
previous arrow
next arrow

ಇಂದು ದಾಂಡೇಲಿಯಲ್ಲಿ ಬೃಹತ್ ಹಿಂದೂ ಸಮಾವೇಶ

300x250 AD

ದಾಂಡೇಲಿ: ನಗರದ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಲ್ಲಿ ಮಾ.25ರಂದು ಹಿಂದೂ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ವಾಸುದೇವ ಪ್ರಭು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಸಂಜೆ 4 ಗಂಟೆಗೆ ನಗರದ ಸುಭಾಸನಗರದಲ್ಲಿರುವ ಒಳಕ್ರೀಡಾಂಗಣದಿಂದ ಆರಂಭವಾಗುವ ಭವ್ಯ ಶೋಭಾಯಾತ್ರೆಡಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಸುಭಾಸನಗರದ ಒಳ ಕ್ರೀಡಾಂಗಣದಲ್ಲಿ ಸಂಪನ್ನಗೊಳ್ಳಲಿದೆ. ಆ ಬಳಿಕ ಅಲ್ಲೆ ಒಳ ಕ್ರೀಡಾಂಗಣ ಮೈದಾನದಲ್ಲಿ  ಬೃಹತ್ ಹಿಂದೂ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ  ಯುವ ವಾಗ್ಮಿ ಕು.ಹಾರಿಕಾ ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಈಗಾಗಲೆ ಹಿಂದೂ ಸಮಾವೇಶಕ್ಕೆ ಸಂಬಂಧಪಟ್ಟಂತೆ ನಗರದ ಹಿಂದು ಪರ ಸಂಘಟನೆಯ ಮುಖಂಡರು, ಕಾರ‍್ಯಕರ್ತರು ದಾಂಡೇಲಿಯನ್ನು ಕೇಸರಿಮಯಗೊಳಿಸಿದ್ದು, ನಗರದೆಲ್ಲೆಡೆ ಕೇಸರಿ ಬಾವುಟ, ಬಂಟಿಂಗ್ಸ್ ಗಳು ರಾರಾಜಿಸುತ್ತಿದೆ. ಹಿಂದೂ ಧರ್ಮದ ರಕ್ಷಣೆ ಮತ್ತು ಜನಜಾಗೃತೆಗಾಗಿ ಹಮ್ಮಿಕೊಂಡಿರುವ ಈ ಸಮಾವೇಶದಲ್ಲಿ ಮತ್ತು ಶೋಭಾಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಭಾಗವಹಿಸಿ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ಪ್ರಮುಖರುಗಳಾದ ಸುಧಾಕರ ಶೆಟ್ಟಿ, ರೋಶನ್ ನೇತ್ರಾವಳಿ, ಸುರೇಶ್ ಕಾಮತ್, ರಾಜಶೇಖರ್ ಪಾಟೀಲ್, ಅರ್ಜುನ್ ನಾಯ್ಕ ಮೊದಲಾದವರು ಇದ್ದರು.

300x250 AD
Share This
300x250 AD
300x250 AD
300x250 AD
Back to top