Slide
Slide
Slide
previous arrow
next arrow

ನನ್ನ ಗೆಲುವು ಕಾರ್ಯಕರ್ತರ ಗೆಲುವಿದ್ದಂತೆ: ಸೂರಜ್ ಸೋನಿ

300x250 AD

ಕುಮಟಾ: ಪಟ್ಟಣದ ಗಿಬ್ ಸರ್ಕಲ್‌ನ ದೇವಕಿ ಕಾನ್ಫರೆನ್ಸ್ ಹಾಲ್‌ನಲ್ಲಿ ನೂತನವಾಗಿ ತೆರೆಯಲಾದ ಜೆಡಿಎಸ್ ಕಾರ್ಯಾಲಯವನ್ನು ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಉದ್ಘಾಟಿಸಿದರು.
ಪಕ್ಷದ ಕಾರ್ಯಾಲಯದಲ್ಲಿ ಗಣ ಹೋಮವನ್ನು ಸೋನಿ ಅವರು ತಮ್ಮ ಪತ್ನಿ ವೀಣಾ ನಾಯ್ಕ ಅವರ ಜೊತೆಗೂಡಿ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರಜ್, ಪಕ್ಷದ ಕಾರ್ಯಕರ್ತರು ಮತ್ತು ನನ್ನ ಗೆಳೆಯರ ಬಳಗದ ಶ್ರಮದಿಂದಲೇ ಕ್ಷೇತ್ರದಲ್ಲಿ ನನ್ನ ಪರ ಅಲೆ ಎದ್ದಿದೆ. ಈ ಬಾರಿ ನಾನು ಗೆಲ್ಲುವ ಸಾಧ್ಯತೆ ನೂರಕ್ಕೆ ನೂರಷ್ಟಿದೆ. ನನ್ನ ಗೆಲುವು ಕಾರ್ಯಕರ್ತರ ಗೆಲುವಿದ್ದಂತೆ. ನಾನು ಶಾಸಕನಾದ ಮೇಲೆ ಬರುವ ಎಲ್ಲ ಚುನಾವಣೆಗಳಲ್ಲಿ ನನ್ನ ಗೆಲುವಿಗೆ ಕಾರಣರಾದ ಮುಖಂಡರನ್ನು ನಾನು ಗೆಲ್ಲಿಸಿ, ಜನಪ್ರತಿನಿಧಿಗಳ ಸ್ಥಾನದಲ್ಲಿ ಕೂರಿಸುತ್ತೇನೆ ಎಂದು ಭರವಸೆ ನೀಡಿದರು.
ಅಲ್ಲದೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೀಡಿದ ಎಲ್‌ಇಡಿ ವಾಹನಕ್ಕೂ ಇಂದು ಚಾಲನೆ ನೀಡಿದ್ದೇವೆ. ಪಂಚರತ್ನ ಯಾತ್ರೆಯ ಯೋಜನೆಗಳ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಈ ಎಲ್‌ಇಡಿ ವಾಹನ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಜಿ.ಹೆಗಡೆ, ಹೊನ್ನಾವರ ಅಧ್ಯಕ್ಷ ಟಿ.ಟಿ.ನಾಯ್ಕ, ಪ್ರಮುಖರಾದ ಜಿ.ಕೆ.ಪಟಗಾರ, ಬಲೀಂದ್ರ ಗೌಡ, ಗೀತಾ ಮುಕ್ರಿ, ದತ್ತು ಪಟಗಾರ, ಅಶೋಕ ನಾಯ್ಕ, ರಮೇಶ ನಾಯ್ಕ, ಮಹಾಬಲೇಶ್ವರ ಗೌಡ, ಸತೀಶ ಮಹಾಲೆ, ವಸಂತ ಗೌಡ, ಶಿವರಾಮ ಮಡಿವಾಳ, ಸಂದೀಪ ಹರಿಕಾಂತ, ಅಣ್ಣಪ್ಪ ನಾಯ್ಕ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top