ಕುಮಟಾ: ಪಟ್ಟಣದ ಹಳೆ ಹೆರವಟ್ಟಾದ ಪಿಡಬ್ಲುಡಿ ಕಚೇರಿ ಸಮೀಪದ ಮಹಾಸತಿ ಕಾಲೋನಿಯಲ್ಲಿ ನೆಲೆಸಿರುವ ಶ್ರೀಮಹಾಸತಿ ದೇವರ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿoದ ಸಂಪನ್ನಗೊoಡಿತು.
ಭಕ್ತರು ಬೆಳಗ್ಗೆಯಿಂದಲೇ ದೇವರಿಗೆ ಹಣ್ಣು-ಕಾಯಿ ಪೂಜಾ ಸೇವೆ ಸಲ್ಲಿಸಿದರು. ದೇವತಾ ಪ್ರಾರ್ಥನೆ, ಪುಣ್ಯಾಹ ನಾಂದಿ, ಸ್ನಪನ ಕಲಶಾಧಿವಾಸ, ಶಕ್ತಿ ತತ್ವ ಕಲಾವೃದ್ಧಿ ಹವನ, ನವಚಂಡಿ ಹವನದ ಬಳಿಕ ಮಧ್ಯಾಹ್ನ 12ಗಂಟೆಗೆ ಕಲಶಾಭಿಷೇಕ, ಹವನ ಪೂರ್ಣಾಹುತಿ ಹಾಗೂ ಮಹಾ ಮಂಗಳಾರತಿ ನಡೆಯಿತು. ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಮಧ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಭೋಜನ ಸವಿದು ಶ್ರೀ ದೇವರ ಕೃಪಾಶೀರ್ವಾದಕ್ಕೆ ಪಾತ್ರರಾದರು.
ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಅವರು ದೇವರ ದರ್ಶನ ಪಡೆದು, ಪ್ರಸಾದ ಸ್ವೀಕರಿಸಿದರು. ಅಲ್ಲದೇ ಅನೇಕ ಗಣ್ಯರು, ಅಧಿಕಾರಿಗಳು, ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು. ಸಂಜೆ ಭಜನಾ ಕಾರ್ಯಕ್ರಮದ ಬಳಿಕ ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಸಮಿತಿಯ ಪ್ರಮುಖರಾದ ರಾಮಕೃಷ್ಣ ಕಾಮತ, ಸಂತೋಷ ನಾಯ್ಕ, ಮನೋಹರ ನಾಯ್ಡು, ಪಾಂಡುರಂಗ ಶೇಟ್, ಸುರೇಶ ಶಾನಭಾಗ, ಶಿವಾನಂದ ನಾಯ್ಕ, ಕಿರಣ ಶೇಟ್, ಮಧುಸೂದನ ಕಿಣಿ, ವಿನಾಯಕ ಗುಡಿಗಾರ, ಸುಧಾ ಪಟಗಾರ, ಗೀತಾ ಪೈ, ಮಹೇಶ ನಾಯ್ಕ, ಎಸ್.ಎಂ.ಭಟ್ಟ, ಪಾಂಡುರಂಗ ಕಾಮತ, ಮಂಜುನಾಥ ನಾಯ್ಕ, ರಾಮ ಎಂ ನಾಯ್ಕ, ಸುಧಾಕರ ನಾಯಕ, ಪಾಂಡುರಂಗ ಗಾವಡಿ, ಪ್ರಭಾಕರ ಹರ್ಮಲಕರ್, ಸುರೇಶ ನಾಯ್ಕ, ಭಾಸ್ಕರ ಹೆಬ್ಬಾರ, ಪ್ರಶಾಂತ ಹರ್ಮಲಕರ್, ಬಾಬು ಡಿ.ನಾಯ್ಕ ಹಾಗೂ ಮಹಾಸತಿ ಭಕ್ತವೃಂದದವರು ಉಪಸ್ಥಿತರಿದ್ದರು.