ಅಂಕೋಲಾ: ಕಳುವಾದ ಮೊಬೈಲ್ ಫೋನನ್ನು ವಿಶೇಷ ತಂತ್ರಜ್ಞಾನ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಪೊಲೀಸರು ವಾರಸುದಾರರಿಗೆ ಮರಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಳುವಾದ, ಸುಲಿಗೆಯಾದ, ಕಳೆದು ಹೋದ ಮೊಬೈಲ್ ಫೋನ್‌ಗಳು ಸೈಬರ್ ಅಪರಾಧ, ನಾರ್ಕೋಟಿಕ್ ಅಪರಾಧ ಹಾಗೂ ಇತರ ಗಂಭೀರ ಅಪರಾಧಗಳಲ್ಲಿ ಬಳಕೆಯಾಗುತ್ತಿರುವುದು ಗಣನೀಯವಾಗಿ ಕಂಡುಬoದಿದೆ. ಇಂತಹ ದುರ್ಬಳಕೆಯನ್ನು ತಡೆಯಲು ಕೇಂದ್ರ ಟೆಲಿಕಮ್ಯೂನಿಕೇಷನ್ ಇಲಾಖೆಯಿಂದ ಇಂಥ ಮೊಬೈಲ್‌ಗಳನ್ನು ಬ್ಲಾಕ್ ಮಾಡುವ ಹಾಗೂ ಪತ್ತೆಯಾದರೆ ಅನ್‌ಬ್ಲಾಕ್ ಮಾಡುವ ವ್ಯವಸ್ಥೆ ಸಿಇಐಆರ್ ಪೋರ್ಟಲ್ ಅನ್ನು ಅನುಷ್ಠಾನಗೊಳಿಸಲಾಗಿದೆ.
ಅದರಂತೆ, ಮಹಿಳೆಯೊಬ್ಬರು 2022ರ ಡಿಸೆಂಬರ್‌ನಲ್ಲ್ಲಿ ಕಳೆದುಕೊಂಡಿದ್ದ ತಮ್ಮ ಬೆಲೆಬಾಳುವ ಮೊಬೈಲನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ, ಪೊಲೀಸ್ ನಿರೀಕ್ಷಕ ಜಾಕ್ಸನ್ ಆರ್.ಡಿಸೋಜಾ ಮತ್ತು ಸಿಇಐಆರ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕಿರಣ್ ನಾಯ್ಕರವರು ಸಂಬAಧಿಸಿದವರಿಗೆ ಹಸ್ತಾಂತರಿಸಿದ್ದಾರೆ.