ಸಿದ್ದಾಪುರ : ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ಕಂದಾಚಾರ ಕತ್ತಲನ್ನು ಬದಿಗೊತ್ತಿ ಬದುಕಿನಲ್ಲಿ ಬೆಳಕು ಮೂಡಿಸುವ ನಿಟ್ಟಿನಲ್ಲಿ ಮಹಿಳೆಯರು ಇಂದು ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಸರಿಸಮಾನವಾಗಿ ಬದುಕನ್ನು ಸಾಧಿಸುವಲ್ಲಿ ಯಶಸ್ಸಿಯಾಗಿದ್ದಾರೆ. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಅಭಿವೃದ್ಧಿ ಪಥದಲ್ಲಿ ಮಹಿಳೆ ಪಾತ್ರ ಹೆಚ್ಚು. ಮಹಿಳೆ ಎಂದಿಗೂ ದೇವತೆ ಸಮಾನವೆಂಬ ಹಿರಿಯ ವಾಣಿ ಇಂದಿಗೂ ಪ್ರಸ್ತುತ ಎಂದು ಶಿರಸಿ ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಹೇಳಿದರು.
ಅವರು ಪಟ್ಟಣದ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ನಿಸರ್ಗ ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ವತಿಯಿಂದ ಆಯೋಜಿಸಲಾದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿಗೂ ಸಹ ಮಹಿಳೆಯರು ಎಲ್ಲಾ ರೀತಿಯ ಸ್ವಾತಂತ್ರ್ಯದ ನಡುವೆಯೂ ಸಹ ನೋವನ್ನು ಅನುಭವಿಸುತ್ತಿದ್ದಾರೆ. ಇದು ಕೇವಲ ಮನೆಯಲ್ಲಿ ಕಾರ್ಯನಿರ್ವಹಿಸುವ ಮಹಿಳೆಗೆ ಮಾತ್ರ ಸೀಮಿತವಾಗಿರದೆ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುವ ಮಹಿಳೆಯರೂ ಸಹ ಹಲವಾರು ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ಧಾರೆ. ನೋವಿನ ಸಂಗತಿ ಎಂದರೆ ಶೇ.70ರಷ್ಟು ಮಹಿಳೆಯರು ಪ್ರತಿನಿತ್ಯ ಕುಡುಕ ಗಂಡನೊಂದಿಗೆ ಹಿಂಸೆಯ ಬದುಕನ್ನು ಅನುಭವಿಸುತ್ತಿದ್ದಾರೆ. ಹಲವಾರು ವಿಧದ ನೋವುಗಳನ್ನು ನುಂಗಿಕೊಂಡು ತಮ್ಮ ಬದುಕಿನ ಸಾರ್ಥಕತೆಗಾಗಿ ಹೋರಾಡುವ ಮಹಿಳೆಯರ ಮನೋಸ್ಥಿತಿಯನ್ನು ಪುರುಷ ಸಮಾಜ ಇನ್ನು ಅರಿಯಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಶೋಭಾ ನಾಯ್ಕ, ಸ್ತ್ರೀ ಶಕ್ತಿ ಸಂಘ ಜಿಲ್ಲಾ ಅಧ್ಯಕ್ಷರು, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ್, ಆಕಾಶ ಸಿದ್ದಾಪುರ, ಶ್ರೀಮತಿ ಶ್ಯಾಮಲಾ, ಚಂದ್ರಕಲಾ ನಾಯ್ಕ, ಪಟ್ಟಣ ಪಂಚಾಯತ ಅಧ್ಯಕ್ಷ, ರವಿ ನಾಯ್ಕ ಜಾತಿಕಟ್ಟಾ, ವಿನಯ ಹೊನ್ನೆಗುಂಡಿ, ಮಾರುತಿ ನಾಯ್ಕ ಹೊಸೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.