Slide
Slide
Slide
previous arrow
next arrow

ಏ.2ಕ್ಕೆ ಪ್ರಜ್ವಲ ಟ್ರಸ್ಟ್’ನಿಂದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

300x250 AD

ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಏ.2ರಂದು ಪ್ರಜ್ವಲ‌ ಟ್ರಸ್ಟ್ ವತಿಯಿಂದ ಜಿಲ್ಲಾಮಟ್ಟದ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷೆ ಬಿಂದು ಹೆಗಡೆ ಹೇಳಿದರು.

ನಗರದ ಸಾಮ್ರಾಟ್‌ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಗಳನ್ನು ಮಾಡುತ್ತ‌ ಗುರುತಿಸಿಕೊಂಡಿರುವ ಪ್ರಜ್ವಲ ಟ್ರಸ್ಟ್‌ ಕೆಲವು ಸದುದ್ದೇಶದೊಂದಿಗೆ ಈ ಭಜನಾ ಕಾರ್ಯಕ್ರಮ ಆಯೋಜಿಸಿದೆ. ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿದ ತಂಡಕ್ಕೆ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ, ತೃತೀಯ ಬಹುಮಾನ 5 ಸಾವಿರ, ಪ್ರೋತ್ಸಾಹಕ ಬಹುಮಾನವಾಗಿ 3 ಸಾವಿರ ರೂ. ನೀಡಲಾಗುತ್ತದೆ ಎಂದರು. ಭಜನಾ ತಂಡದಲ್ಲಿ ವಾದ್ಯದವರನ್ನೂ ಸೇರಿ ಕನಿಷ್ಠ 5 ರಿಂದ 7 ಸದಸ್ಯರು ಇದ್ದು, ಪಕ್ಕವಾದ್ಯಗಳನ್ನು ಅಂಕ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಯಾವುದೇ ಭಜನೆ ಹೇಳಬಹುದಾಗಿದ್ದು, ಗುಂಪಿನ ಸದಸ್ಯರ ಸಹಭಾಗಿತ್ವ, ಸಮಯ, ಸ್ಪಷ್ಟ ಉಚ್ಛಾರ, ತಾಳ, ಲಯ ಇವುಗಳನ್ನು ಪರಿಶೀಲಿಸಿ ಅಂಕ ನೀಡಲಾಗುತ್ತದೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು, ಯಾವುದೇ ಚರ್ಚೆಗೆ ಅವಕಾಶ ಇಲ್ಲ. ಭಾಗವಹಿಸಲು ಇಚ್ಛಿಸುವವರಿಗೆ ಮಾ.25 ಹೆಸರು ನೋಂದಾಯಿಸಲು ಅಂತಿಮ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಬೇಕು ಎಂದು ಕೋರಿದರು.

300x250 AD

ಈ ಕಾರ್ಯಕ್ರಮದ ಜೊತೆಗೆ ತೆರೆಮರೆಯ ಸಾಧಕರಿಗೆ ಸನ್ಮಾನವೂ ನಡೆಯಲಿದ್ದು, ಬಹುಮಾನ ವಿತರಣೆಯ ನಂತರ ಉಸ್ತಾದ್‌ ಮೌಶಿನ್‌ ಖಾನ್‌ ಅವರಿಂದ ಸಿತಾರ ವಾದನ ಹಾಗೂ ಪಂ. ರಾಜೇಂದ್ರ ನಾಕೋಡ ಅವರಿಂದ ತಬಲಾ ವಾದನ ನಡೆಯಲಿದೆ. ಹಣತೆ ಬೆಳಕಿನಲ್ಲಿ ಸಾಮೂಹಿಕ ರಾಮರಕ್ಷಾ ಸ್ತೋತ್ರ ಪಠಣ, ನವೀನ್‌ ಆರ್‌. ಹೆಗಡೆ ಅವರಿಂದ ಕಥಕ್‌ ನೃತ್ಯ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುಮಾ ಹೆಗಡೆ, ನಯನಾ ಹೆಗಡೆ, ರಾಘವೇಂದ್ರ ಹೆಗಡೆ ಇದ್ದರು. ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ tel:+919482111131, tel:+917338498524 ಸಂಪರ್ಕಿಸಲು ಕೋರಿದೆ.

Share This
300x250 AD
300x250 AD
300x250 AD
Back to top