Slide
Slide
Slide
previous arrow
next arrow

ಇಂದು ಟಿ.ಆರ್.ಸಿ.ಯಲ್ಲಿ‌ ‘ಬೇಡರವೇಷ 2023 ಅಭಿನಂದನಾ ಕಾರ್ಯಕ್ರಮ’

300x250 AD

ಶಿರಸಿ: ಟೀಮ್ ಆತ್ಮೀಯ ಶಿರಸಿ ಇವರ ಆಶ್ರಯದಲ್ಲಿ ಟಿ.ಎಸ್.ಎಸ್ ಶಿರಸಿ ಇವರ ಸಹಕಾರದೊಂದಿಗೆ 2023ನೇ ಸಾಲಿನಲ್ಲಿ ಬೇಡರವೇಷ ಕಲೆಯನ್ನು ಪ್ರದರ್ಶಿಸಿದ ಪ್ರತಿಯೊಬ್ಬ ಬೇಡರ ವೇಷಧಾರಿಗೆ ಸನ್ಮಾನಿಸಿ ಅಭಿನಂದಿಸುವ ಸಲುವಾಗಿ ‘ಶಿರಸಿಯ ಹೆಮ್ಮೆ ಬೇಡರವೇಷ 2023 ಅಭಿನಂದನಾ ಕಾರ್ಯಕ್ರಮ’ ಎಂಬ ವಿನೂತನ‌ ಕಾರ್ಯಕ್ರಮವನ್ನು ಮಾ.10 ಶುಕ್ರವಾರ ಸಂಜೆ 4.30ರಿಂದ ನಗರದ ಟಿ.ಆರ್.ಸಿ. ಸಭಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ‌ ಉದ್ಘಾಟನೆಯನ್ನು ಟಿಎಸ್ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಬೇಡರವೇಷ ಕಲಾವಿದ ರಾಚಪ್ಪ ಜೋಗಳೇಕರ್ ವಹಿಸಲಿದ್ದಾರೆ.

300x250 AD

ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ್, ಟಿಎಸ್ಎಸ್ ಪ್ರಧಾನ‌ವ್ಯವಸ್ಥಾಪಕ‌ ರವೀಶ ಹೆಗಡೆ, ಯುವ ಮುಖಂಡ ಶ್ರೀಪಾದ‌ ಹೆಗಡೆ ಕಡವೆ, ನಗರಸಭೆ ಅಧ್ಯಕ್ಷ ಗಣಪತಿ‌ ನಾಯ್ಕ್ ಗೌರವ ಉಪಸ್ಥಿತಿ ನೀಡಲಿದ್ದು, ನಿವೃತ್ತ ಪ್ರಾಂಶುಪಾಲ ಕೆ.ಎನ್.ಹೊಸಮನಿ ಪ್ರಸ್ಥಾವನಾ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಲಾಗಿದೆ.

Share This
300x250 AD
300x250 AD
300x250 AD
Back to top