Slide
Slide
Slide
previous arrow
next arrow

ಫೆ.17 ರಿಂದ ಈಶ್ವರೀಯ ವಿಶ್ವವಿದ್ಯಾಲಯದಿಂದ ವಿಶೇಷ ಕಾರ್ಯಕ್ರಮ

300x250 AD

ಶಿರಸಿ : ನಗರದ ವ್ಯಾಯಾಮ ಶಾಲೆಯ ಮೈದಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಫೆ.17 ರಿಂದ 20 ರವರೆಗೆ ಕೋಟಿ ಶಿವಲಿಂಗ ದರ್ಶನ, ಹಲೋಗ್ರಾಫಿಕ್ ಶಿವದರ್ಶನ, ಭಾರತದ ಸುಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ, ಮ್ಯಾಜಿಕ್ ಆಫ್ ಮೆಡಿಟೇಶನ್ ಹಾಗೂ ರಾಜಯೋಗ ಚಿತ್ರ ಪ್ರದರ್ಶನ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಪ್ರತಿದಿನ ಸಂಜೆ 5 ರಿಂದ 6 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ 6 ರಿಂದ 7 ಗಂಟೆಯವರೆಗೆ ರಾಷ್ಟ್ರದ ಪ್ರಸಿದ್ಧ ಆಧ್ಯಾತ್ಮ ಚಿಂತಕರಾದ ರಾಜಯೋಗಿನಿ ಬಿ.ಕೆ. ವೀಣಾಜಿ ಅವರಿಂದ ಶಿವ ಚಿಂತನ ಪ್ರವಚನ ಕಾರ್ಯಕ್ರಮ‌ ನಡೆಯಲಿದೆ. ಹಾಗೆಯೇ ಸಮಾಜದ ಹಿರಿಯರು ಹಾಗೂ ಗಣ್ಯರಿಂದ ದ್ವಾದಶ ಜ್ಯೋತಿರ್ಲಿಂಗಗಳ ಎದುರು ದೀಪಾರಾಧನೆಯನ್ನೂ ಅಯೋಜಿಸಲಾಗಿದೆ.
ಫೆ.17 ರಂದು ಮಧ್ಯಾಹ್ನ 3.30 ರಿಂದ ಭವ್ಯ ಶಾಂತಿಯಾತ್ರೆ, ಬೈಕ್ ರ‍್ಯಾಲಿ-ಶಿವಲಿಂಗಗಳ ಮೆರವಣಿಗೆ ನಡೆಯಲಿದೆ.

300x250 AD
Share This
300x250 AD
300x250 AD
300x250 AD
Back to top