Slide
Slide
Slide
previous arrow
next arrow

ಫೆ.15ಕ್ಕೆ ಕಾಂಗ್ರೆಸ್’ನಿಂದ ಕರಾವಳಿ ಪ್ರಜಾಧ್ವನಿ ಯಾತ್ರೆ

300x250 AD

ಶಿರಸಿ:  ಜಿಲ್ಲಾ ಕಾಂಗ್ರೆಸ್‌’ನಿಂದ ಕೆಪಿಸಿಸಿ ನಿರ್ದೇಶನದಂತೆ ಕರಾವಳಿ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮವನ್ನು ಫೆ.15, ಬುಧವಾರ ಬೆಳಿಗ್ಗೆ 10 ಘಂಟೆಗೆ ನಗರದ ಅಕ್ಷಯ ಗಾರ್ಡನ್, ಗಣೇಶನಗರದಲ್ಲಿ ಹುಲೇಕಲ್ ಜಿಲ್ಲಾ ಪಂಚಾಯತ್ ಮತ್ತು ಸಿರಸಿ ನಗರಸಭಾ ವ್ಯಾಪ್ತಿಯಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅದೇ ದಿನ 11-30 ಘಂಟೆಗೆ ದೊಡ್ನಳ್ಳಿ ಹಾಗೂ ಜಾನ್ಮನೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಸಭಾಕಾರ್ಯಕ್ರಮವು ಹುಸರಿ‌ ರಸ್ತೆಯ ಬಚಗಾಂವದ ಪಾಂಡುರಂಗ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಸಭಾಕಾರ್ಯಕ್ರಮದಲ್ಲಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಯೂರ ಜಯಕುಮಾರ, ಐವನ್ ಡಿಸೋಜಾ, ವಿಧಾನಪರಿಷತ್ ಸದಸ್ಯ‌ ಮಂಜುನಾಥ ಭಂಡಾರಿ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪರವರು, ಕರಾವಳಿ ಪ್ರಜಾಧ್ವನಿ ಯಾತ್ರೆ ಜಿಲ್ಲಾ ಸಂಯೋಜಕ‌ ನಿವೇದಿತ್ ಆಳ್ವ,ಉ.ಕ. ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವಕರ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ  ಹಾಜರಿರಲಿದ್ದಾರೆ.

300x250 AD

ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಸೆಲ್ ಅಧ್ಯಕ್ಷರು ಮತ್ತು ಸದಸ್ಯರು, ಜಿಲ್ಲಾ ಪಂಚಾಯತ- ತಾಲೂಕ ಪಂಚಾಯತ-ಗ್ರಾಮ ಪಂಚಾಯತ-ನಗರಸಭಾ-ಸಂಘ ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು,ಬೂತ್ ಘಟಕ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top