Slide
Slide
Slide
previous arrow
next arrow

ಜಿಲ್ಲೆಯ ಹೈನುಗಾರರ ಬೆನ್ನೆಲುಬಾಗಿ ಒಕ್ಕೂಟ ಕಾರ್ಯನಿರ್ವಹಿಸಲಿದೆ; ಶಂಕರ ಮುಗದ

300x250 AD

ಶಿರಸಿ: ಜಿಲ್ಲೆಯ ಹೈನುಗಾರರ ಅನುಕೂಲತೆಗಾಗಿ 3 ದಿನಗಳ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಶಿರಸಿಯಲ್ಲಿಯೇ ನಡೆಸಲಾಗುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಹೇಳಿದರು.

ಅವರು ಕರ್ನಾಟಕ ಸಹಕಾರ ಹಾಲು ಮಹಾಮಂಡಳಿ ನಿ., ಬೆಂಗಳೂರು, ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡ ತರಬೇತಿ ಕೇಂದ್ರ ಇವರಿಂದ ಕ್ಷೀರ ಸಂಜೀವಿನಿ ಯೋಜನೆಗೆ ಅಳವಡಿಸಿರುವ ಉತ್ತರಕನ್ನಡ ಜಿಲ್ಲೆಯ ಆಯ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರುಗಳಿಗೆ ಏರ್ಪಡಿಸಿರುವ 3 ದಿನಗಳ ಹೈನುರಾಸು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

3 ದಿನಗಳ ಹೈನುರಾಸು ನಿರ್ವಹಣಾ ತರಬೇತಿಯನ್ನು ಈ ಮೊದಲು ಧಾರವಾಡದ ರಾಯಾಪುರ ತರಬೇತಿ ಕೇಂದ್ರದಲ್ಲಿ ಪಡೆಯಬೇಕಿತ್ತು, ಆದರೆ ಜಿಲ್ಲೆಯ ನಿರ್ದೇಶಕರು ಹಾಗೂ ತಮ್ಮೆಲ್ಲರ ಮನವಿಯಂತೆ ಒಕ್ಕೂಟದ ಆಡಳಿತ ಮಂಡಳಿ ಹಾಗೂ ತರಬೇತಿ ಕೇಂದ್ರ ರಾಯಾಪುರ ಇವರಿಂದ ಶಿರಸಿಯಲ್ಲಿಯೇ 3 ದಿನಗಳ ಕಾಲ ಹೈನುರಾಸು ನಿರ್ವಹಣಾ ತರಬೇತಿಯನ್ನು ಆಯೋಜಿಸಲಾಗಿದೆ. ಕೆಲ ವೈಜ್ಞಾನಿಕ ಮಾಹಿತಿಗಳನ್ನು ತಮಗೆ ನಾವು ಈ ತರಬೇತಿಯ ಮೂಲಕ ನೀಡಿ ಪಶು ಆಹಾರ, ಮೇವು ಹಾಗೂ ಖನಿಜ ಮಿಶ್ರಣಗಳ ಸದ್ಬಳಕೆ, ಹಾಗೂ ರಾಸುಗಳಿಗೆ ತಗುಲಲಿರುವ ಸಾಂಕ್ರಾಮಿಕ ರೋಗಗಳು ಮತ್ತು ಅವುಗಳನ್ನು ತಡೆಯಲು ವಹಿಸಬೇಕಾದ ಮುನ್ನೆಚರಿಕಾ ಕ್ರಮಗಳನ್ನು ತಿಳಿಸಲಾಗುವುದು ಎಂದರು.

ರೈತರು ಸಾಕುವ ರಾಸುಗಳಿಂದ ಪಡೆಯುವ ಉಪಯೋಗಳನ್ನು ಹೊರತುಪಡಿಸಿ ರಾಸುಗಳಿಂದ ಜನಿಸಲ್ಪಟ್ಟ ಕರುಗಳ ಮಾರಾಟ ಹಾಗೂ ಅವುಗಳಿಂದ ಪಡೆಯುವ ಉಪಯೋಗಗಳ ಬಗ್ಗೆಯೂ ಸಹಿತ ಈ ತರಬೇತಿ ಕಾರ್ಯಕ್ರಮದ ಮೂಲಕ ತಿಳಿಸುವ ಉದ್ದೇಶ ನಮ್ಮದಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಹಾಲು ಉತ್ಪಾದಕರಿಗೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ರಬ್ಬರ್‌ ಮ್ಯಾಟ್‌,ಹಾಲು ಕರೆಯುವ ಯಂತ್ರ ಹಾಗೂ ಮೇವು ಕತ್ತರಿಸುವ ಯಂತ್ರಗಳನ್ನು ಅನುದಾನದ ಅಡಿಯಲ್ಲಿ ನೀಡಲಾಗಿದ್ದು, ಮುಂದಿನ ದಿನಗಳಲ್ಲೂ ಸಹ ತಮಗೆ ಸಿಗಬಹುದಾದ ಎಲ್ಲಾ ರೀತಿಯ ಸಹಾಯ ಸೌಲಭ್ಯಗಳನ್ನು ಒಕ್ಕೂಟದಿಂದ ನೀಡಲಾಗುವುದು ಎಂದರು.

300x250 AD

ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಮಾತನಾಡಿ, 5 ವರ್ಷಗಳ ಹಿಂದೆ ನಮ್ಮ ಒಕ್ಕೂಟದ ವ್ಯಾಪ್ತಿಯಲ್ಲಿ ಸಂಗ್ರಹವಾಗುತ್ತಿದ್ದ ಹಾಲಿನಿಂದ ತಯಾರಿಸಲ್ಪಡುತ್ತಿದ್ದ ಹಾಲಿನ ಪುಡಿಯನ್ನು ಮಾರಾಟ ಮಾಡುವುದು ನಮ್ಮಿಂದ ಕಷ್ಟಸಾಧ್ಯವಾಗಿತ್ತು. ಆದರೆ ಪ್ರಸ್ತುತವಾಗಿ ಹಾಲಿಗೆ ಹಾಗೂ ಹಾಲಿನ ಉತ್ಪನ್ನಗಳಿಗೆ ಅಧಿಕ ಬೇಡಿಕೆಯಿದ್ದು, ಹೈನುಗಾರಿಕೆ ನಡೆಸಲು ಬೇಕಾಗುವ ಎಲ್ಲ ಅನುಕೂಲ ಪರಿಸ್ಥಿತಿ ಇಂದು ಲಭ್ಯವಿದೆ. ಆದರೆ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಕುಂಠಿತಗೊಳ್ಳುತ್ತಿರುವುದರಿಂದ ಒಕ್ಕೂಟಕ್ಕೆ ಪ್ರತೀ ದಿನ ಸುಮಾರು 25 ಸಾವಿರ ಲೀಟರ್‌ನಷ್ಟು ಹಾಲಿನ ಕೊರತೆಯಿದೆ. ಹಾಲಿನ ಶೇಖರಣೆ ಹೆಚ್ಚಾದಲ್ಲಿ ನಾವು ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗುತ್ತದೆ. ಇದಕ್ಕೆ ರಾಜ್ಯ ಸರಕಾರದ ಸಹಾಯವೂ ಸಹ ನಮಗೆ ಬೇಕಾಗಿದ್ದು ಈ ನಿಟ್ಟಿನಲ್ಲಿ ಸರಕಾರದ ಜೊತೆ ಮಾತುಕತೆ ನಿರಂತರವಾಗಿ ನಡೆಯುತ್ತಿದೆ ಎಂದರು.

ನಮ್ಮ ಭಾಗದಲ್ಲಿ ಹೈನುಗಾರಿಕೆಯನ್ನು ಮಾಡುತ್ತಿದ್ದು ಅದರಿಂದ ಸೂಕ್ತ ಲಾಭಗಳಿಸುವುದು ಹೇಗೆ ಎಂಬುದನ್ನು ತಿಳಿಯದೇ ಇರುವುದಿಂದ ಈ ತರಬೇತಿ ಕಾರ್ಯಕ್ರಮದ ಮೂಲಕ ಹೈನೋದ್ಯಮವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವುದರ ಜೊತೆಗೆ ಹೇಗೆ ಈ ಕಸುಬನ್ನು ಲಾಭದಾಯಕವಾಗಿ ಮಾಡುವುದು ಎಂಬುದೇ ಈ ತರಬೇತಿ ಕಾರ್ಯಕ್ರಮದ ಸದುದ್ದೇಶವಾಗಿದೆ ಎಂದರು. ಸದ್ಯ ಅಡಿಕೆ ಬೆಳೆಯಿಂದ ಬರುವ ಆದಾಯದ ಮುಂದೆ ಹೈನುಗಾರಿಕೆಯ ಆದಾಯ ನಮಗೆ ಕಾಣದೇ ಇರಬಹುದು ಆದರೆ ಮುಂದೊಂದು ದಿನ ನಾವು ಬೆಳೆಯುವ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ದರ ಸಿಗದೇ ಇದ್ದಾಗ ಹೈನುಗಾರಿಕೆಯಲ್ಲಿ ಬರುವ ಪ್ರತಿಯೊಂದು ರೂಪಾಯಿ ಕೂಡ ನಮಗೆ ಲಾಭದಾಯಕ ಎನಿಸುವ ದಿನಗಳು ಬರಬಹುದಾಗಿದ್ದು, ಜಿಲ್ಲೆಯ ರೈತರು ಹೈನೋದ್ಯಮದಿಂದ ವಿಮುಖರಾಗದೇ ಮನೆಗೊಂದು ಹಸುಕಟ್ಟಿ ಗ್ರಾಮಕ್ಕೊಂದು ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾವು ಸ್ಥಾಪಿಸುವತ್ತ ಹೆಜ್ಜೆಯನ್ನಿಡಬೇಕು ಎಂದು ತಿಳಿಸಿದರು. ಅತೀ ಹೆಚ್ಚು ಮಹಿಳೆಯರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದರಿಂದ ಅಮೂಲ್‌ ಎಂಬ ದೊಡ್ಡ ಸಹಕಾರ ಸಂಸ್ಥೆ ಇಂದು ವಿಶ್ವ ವಿಖ್ಯಾತವಾಗಿದೆ ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಕೂಡಾ ಅಂತಹ ಪ್ರಯತ್ನಗಳು ಹೈನುಗಾರಿಕೆಯಲ್ಲಿ ಆಗಬೇಕಾಗಿದ್ದು ಅದಕ್ಕೆ ತಮಗೆ ಬೇಕಾದ ಎಲ್ಲಾ ಸಹಾಯ ಸವಲತ್ತುಗಳನ್ನು ಸದಾ ಒದಗಿಸಲು ಜಿಲ್ಲೆಯ ಮೂರು ನಿರ್ದೇಶಕರುಗಳಾದ ನಾವು ಯಾವಾಗಲೂ ಸಿದ್ದ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ ಶಿರಸಿಯ ಡೀನ್‌ ಡಾ. ಎಂ ಎಚ್‌ ತಟಗಾರ, ಧಾರವಾಡ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರಾದ ಪರಶುರಾಮ ವೀರಭದ್ರ ನಾಯ್ಕ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಲೋಹಿತೇಶ್ವರ ಕೆ ಎಂ, ಜಂಟೀ ನಿರ್ದೇಶಕರುಗಳಾದ ಡಾ. ವಿರೇಶ ತರಲಿ, ಡಾ. ಎಂ ಬಿ ಮಡಿವಾಳರ, ಹೇಮಶೇಖರಪ್ಪ, ಜಿಲ್ಲಾ ಮುಖ್ಯಸ್ಥರಾದ ಎಸ್‌.ಎಸ್‌.ಬಿಜೂರ್‌, ಒಕ್ಕೂಟದ ವಿಸ್ತರಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಕಾಶ ಕೆ. ಸ್ವಾಗತಿಸಿದರೆ ದಯಾನಂದ ಎ. ಎನ್‌. ವಂದಿಸಿದರು.

Share This
300x250 AD
300x250 AD
300x250 AD
Back to top