• Slide
    Slide
    Slide
    previous arrow
    next arrow
  • ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ: ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

    300x250 AD

    ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸುವ ಪ್ರಯತ್ನ ಜರುಗಿದ್ದಲ್ಲಿ ಅಂತಹ ಅರಣ್ಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

     ಅವರು ತಾಲೂಕಿನ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಸರಕಾರದ ಆದೇಶವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

     ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಹಕ್ಕನ್ನು ರಕ್ಷಿಸಲು ಸರಕಾರ ನಿರ್ದೇಶನ ನೀಡಿದಾಗಿಯೂ ಅರಣ್ಯ ಸಿಬ್ಬಂದಿಗಳು ಸರಕಾರದ ನಿರ್ದೇಶನ ನಿರ್ಲಕ್ಷಿಸುತ್ತಿರುವುದಕ್ಕೆ ಅವರು ಖೇದಕರ ವ್ಯಕ್ತಪಡಿಸಿದರು.

     ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪರಿಶೀಲನಾ ಪ್ರಕ್ರೀಯೆ ಪೂರ್ಣವಾಗುವವರೆಗೆ ಅರಣ್ಯವಾಸಿಯನ್ನು ಅಧಿಭೋಗದಲ್ಲಿರುವ ಅರಣ್ಯ ಜಮೀನಿನಿಂದ ಒಕ್ಕಲೆಬ್ಬಿಸಬಾರದು ಹಾಗೂ ಅರಣ್ಯ ಒತ್ತುವರಿ ಮತ್ತು ಅರಣ್ಯವಾಸಿಯ ಪಟ್ಟಾ ಜಮೀನು ಸೇರಿ 3ಎಕರೆಕ್ಕಿಂತ ಕಡಿಮೆ ಇರುವ ಅರಣ್ಯ ಒತ್ತುದಾರರನ್ನು ಒಕ್ಕಲೆಬ್ಬಿಸಲಾಗುವುದಿಲ್ಲ ಎಂಬ ಆದೇಶದಲ್ಲಿನ ಅಂಶವನ್ನ ಸಭೆಯಲ್ಲಿ ಉಲ್ಲೇಖಿಸಿದರು.

    300x250 AD

     ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಪಾಂಡುರಂಗ ನಾಯ್ಕ ಬೆಳಕೆ ಅವರು ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು. ಜಿಲ್ಲಾ ಸಂಚಾಲಕ ದೇವರಾಜ ಗೊಂಡ ವಂದನಾರ್ಪಣೆಯನ್ನು ಮಾಡಿದರು. ಸಭೆಯನ್ನು ಉದ್ದೇಶಿಸಿ ತಂಜೀಮ್ ಅಧ್ಯಕ್ಷ ಇನಾಯತ್ ಸಾಬಂದ್ರಿ, ರಿಜವಾನ್, ಸೋಮ ಮರಾಠಿ, ಮಂಜುನಾಥ ನಾಗು ಮರಾಠಿ, ರಾಮು ಮರಾಠಿ, ಕಯುಂ ಬಾಯ್ ಮುಂತಾದವರು ಮಾತನಾಡಿದರು.

    ಬೆಂಗಳೂರು ಚಲೋಗೆ ಸಹಸ್ರಾರು ಅರಣ್ಯವಾಸಿಗಳು:
     ಫೇಬ್ರವರಿ 10 ರಂದು ಬೆಂಗಳೂರಿನಲ್ಲಿ ಜರುಗುವ ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಭಟ್ಕಳ ತಾಲೂಕಿನಾದ್ಯಂತ ಸಹಸ್ರಾರು ಸಂಖ್ಯೆಯ ಅರಣ್ಯವಾಸಿಗಳು ಭಾಗವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top