• Slide
  Slide
  Slide
  previous arrow
  next arrow
 • ಮನುಷ್ಯ ಜೀವನ ವ್ಯರ್ಥಮಾಡದೇ ಪರಿಸರ ಸೇವೆ ಮಾಡಿ ಜೀವಿಸಿ: ವಿ.ಕೆ. ಹೆಗಡೆ

  300x250 AD

  ಶಿರಸಿ: ಜೈವಿಕ ಪರಿಸರ, ಬೌದ್ಧಿಕ ಪರಿಸರದ ವ್ಯತ್ಯಾಸವನ್ನು ವಿವರಿಸುತ್ತಾ ಮಣ್ಣು, ಆಕಾಶ, ವಾಯು ಇವೆಲ್ಲ ಬದುಕಿನ ಪರಿಸರದ ಮೇಲೆ ಪ್ರಮುಖವಾದದ್ದು. ಮನುಷ್ಯನ ಜೀವನವನ್ನು ವ್ಯರ್ಥ ಮಾಡದೆ ಪರಿಸರಕ್ಕೆ ಸೇವೆ ಮಾಡುತ್ತಾ ಅದರೊಂದಿಗೆ ಬೆಸೆದುಕೊಂಡು ಜೀವಿಸಬೇಕು. ರಾಷ್ಟ್ರೀಯ ಸಂಪತ್ತಿನ ಶೇಕಡಾ ಏಳರಿಂದ ಎಂಟರಷ್ಟು ಹಣವನ್ನು ಪರಿಸರ ಸಂರಕ್ಷಣೆಗೆ ವೆಚ್ಚ ಮಾಡುತ್ತಿದ್ದಾರೆ ಎಂದು ವಿ.ಕೆ‌.ಹೆಗಡೆ ಹೇಳಿದರು.

  ಅವರು ಮುರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲಿಯಲ್ಲಿ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ದಿನದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡಿದರು. ಕರಾವಳಿ, ಮಲೆನಾಡು ಮತ್ತು ಅರೆ ಮಲೆನಾಡು ಇವೆಲ್ಲವನ್ನೂ ಒಳಗೊಂಡಂತಹ ಏಕೈಕ ಜಿಲ್ಲೆ ನಮ್ಮದಾಗಿದೆ. ಎಲ್ಲಾ ವಾತಾವರಣಕ್ಕಿಂತಲೂ ನಮ್ಮ ಜಿಲ್ಲೆ ಅತ್ಯದ್ಭುತವಾಗಿದೆ. ಕೇವಲ ಅಕ್ಷರಗಳನ್ನು ಕಲಿತವರು ವಿದ್ಯಾವಂತರಲ್ಲ ಯಾರಲ್ಲಿ ಆಚಾರ ವಿಚಾರಗಳು ಇರುತ್ತದೆಯೋ, ಒಳ್ಳೆಯ ಮನೋಭಾವನೆಗಳು ಇರುತ್ತದೆಯೋ ಅಂತವರನ್ನು ವಿದ್ಯಾವಂತರು ಎನ್ನಬಹುದು. ಭೌತಿಕವಾದಂತಹ ಜೈವಿಕ ಪರಿಸರವನ್ನು ನಾವು ನಾಶಮಾಡುತ್ತಿದ್ದೇವೆ. ತಮ್ಮಲ್ಲಿರುವ ಸಣ್ಣತನವನ್ನು ಬಿಟ್ಟು ದೊಡ್ಡತನವನ್ನು ಬೆಳೆಸಿಕೊಂಡರೆ ಎಲ್ಲರಿಗೂ ಆದರ್ಶಮಯವಾಗಿ ಬದುಕಬಹುದು ಎಂದು ಹೇಳಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಎಸ್.ಭಟ್ ಉಪ್ಪೋಣಿ ಮಾತನಾಡಿ ಶೇಕಡ 50ರಷ್ಟು ಬಡವರು, ಮಧ್ಯಮ ವರ್ಗದವರು 70ರಷ್ಟು ತೆರಿಗೆಯನ್ನು ತುಂಬುತ್ತಿದ್ದೇವೆ. ಮುಂದಿನ ಸಮಾಜವನ್ನು ನಿರ್ಮಿಸುವಲ್ಲಿ ಯುವಜನರ ಪಾತ್ರ ತುಂಬಾ ಪ್ರಮುಖವಾಗಿರುತ್ತದೆ. ಯುವ ಜನರು ತಮ್ಮ ಬದುಕಿನ ಮಟ್ಟವನ್ನು ಎತ್ತರಿಸುವಲ್ಲಿ ನಿರಂತರತೆ ಎಂಬುದನ್ನು ಹೊಂದಿರಬೇಕು. ಸರಿಯಾಗಿ ನಾವು ಕೃಷಿಯನ್ನು ನಡೆಸಿದ್ದಲ್ಲಿ ನಮ್ಮ ಜನಸಂಖ್ಯೆ ಆರರಷ್ಟು ಜನರಿಗೆ ನಾವು ಆಹಾರವನ್ನು ನೀಡಬಹುದಾಗಿದೆ. ಜನಸಂಖ್ಯೆ ಹೆಚ್ಚಳದಿಂದ ಪರಿಸರ ಕ್ಷೀಣಿಸುತ್ತದೆ ಎಂಬ ಮಾತು ಸುಳ್ಳಾಗಿದೆ. ಕೋಟ್ಯಾಂತರ  ವರ್ಷಗಳಿಂದಾ ಜೀವಿಸುತ್ತಿರುವ ಪ್ರಾಣಿ ಪಕ್ಷಿಗಳ ಸಂಕುಲಗಳನ್ನು ನಾಶ ಮಾಡಲು ಮನುಜರಾದ ನಾವು ಹೊರಟಿದ್ದೇವೆ. ಪರಿಸರವನ್ನು ರಕ್ಷಿಸಿದರೆ ನಾವು ಜೀವನದಲ್ಲಿ ಮೋಕ್ಷವನ್ನು ಕಾಣಬಹುದು ಹಾಗೂ ಅಭಿವೃದ್ಧಿಯನ್ನು ಅರಿತಾಗ ನಾವು ಭೂಮಿಯ ಮೇಲೆ ಬದುಕಲು ಯೋಗ್ಯರಾಗಿದ್ದೇವೆ ಎಂದು ಹೇಳಿದರು.

  300x250 AD

  ಕಾರ್ಯಕ್ರಮದ ಅತಿಥಿಗಳಾದ ಡಾ.ಅನಿಲ್ ಹೆಗಡೆ ಮಾತನಾಡಿ ಯಾವಾಗ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆಯೋ ಆಗ ನಾವು ಪರಿಸರಕ್ಕೆ ಕೊಡುಗೆಯನ್ನು ನೀಡಬಹುದು. ನಮ್ಮ ಉತ್ತಮ ಸಂಸ್ಕಾರದಿಂದ ನಾವು ಪರಿಸರವನ್ನು ರಕ್ಷಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

   ಎನ್ಎಸ್ಎಸ್ ಸಂಚಾಲಕರಾದ ಆರ್, ಆರ್, ಹೆಗಡೆ ಉಪಸ್ಥಿತರಿದ್ದರು.ಭಾವನಾ ನಿರೂಪಿಸಿದರು, ದರ್ಶನ ಸ್ವಾಗತಿಸಿದರು, ಹಾಗೂ ರಮ್ಯಾ ವಂದಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top