Slide
Slide
Slide
previous arrow
next arrow

ಲಿಂಟಲ್ ಒಡೆದು ಕಬ್ಬಿಣದ ಸರಳು ಕಳುವು: ದೂರು

300x250 AD

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಮಾಡುತ್ತಿರುವ ಐಆರ್‌ಬಿ ಕಂಪನಿಯ ಜೆಸಿಬಿ ಯಂತ್ರದ ಚಾಲಕ ಖಾಸಗಿ ಜಾಗದಲ್ಲಿ ಹಾಕಲಾಗಿದ್ದ ಲಿಂಟಲ್ ಒಡೆದು ಅದರಲ್ಲಿದ್ದ ಕಬ್ಬಿಣದ ಸರಳುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಗುಡ್ಲಕ್ ರಸ್ತೆಯ ನಿವಾಸಿ ಮೊಹಮ್ಮದ್ ಜುಬೇರ್ ಇಕ್ಕೇರಿ ಎಂಬುವವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ತಮ್ಮ ಖಾಸಗಿ ಜಾಗದಲ್ಲಿ ಅಂಗಡಿ ಇದ್ದು, ಭಾರೀ ವಾಹನಗಳ ಓಡಾಟಕ್ಕೆ ಅನುಕೂಲವಾಗುವಂತೆ ಅಂಗಡಿಯ ಮುಂದೆ ಉತ್ತಮ ಗುಣಮಟ್ಟದಿಂದ ಹಾಸುಗಲ್ಲು ಹಾಕಿ ರಸ್ತೆ ನಿರ್ಮಿಸಲಾಗಿತ್ತು. ಆದರೆ ಹೆದ್ದಾರಿ ಕಾಮಾಗಾರಿ ನೆಪದಲ್ಲಿ ಹಾಸುಗಲ್ಲು ಒಡೆದು ಅದರಲ್ಲಿನ ಕಬ್ಬಿಣದ ಸರಳುಗಳನ್ನು ಜೆಸಿಬಿ ಚಾಲಕ ಹಾಗೂ ಮೇಲ್ವಿಚಾರಕ ಕದ್ದಿದ್ದಾರೆ ಎಂದು ದೂರಿನಲ್ಲಿ ಜುಬೇರ್ ತಿಳಿಸಿದ್ದಾರೆ.
ಈ ರೀತಿ ಅವ್ಯಾಹತವಾಗಿ ಲಿಂಟಲ್ ಮುರಿದು ಕಂಬಿಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಸ್ಥಳೀಯರು ಚಾಲಕನನ್ನು ಪ್ರಶ್ನಿಸಿದಾಗ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆದರೆ ಮೇಲ್ವಿಚಾರಕರ ನೆರವಿನಿಂದ ಕಬ್ಬಿಣದ ಸರಳುಗಳನ್ನು ಜೆಸಿಬಿಗೆ ಹಾಕಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಕೂಡಲೇ ಕಳ್ಳತನದ ಪ್ರಕರಣ ದಾಖಲಿಸಿಕೊಂಡು ಚಾಲಕನ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top