ಭಟ್ಕಳ: ವಿಶ್ವವಿಖ್ಯಾತ ಮುರ್ಡೇಶ್ವರದ ಮ್ಹಾತೋಬಾರ ಶ್ರೀಮುರ್ಡೇಶ್ವರ ದೇವರ ಮಹಾರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿದ ಶುಕ್ರವಾರ ಸಂಜೆ ನೆರವೇರಿತು.
ಜ.15ರಿಂದ ರಿಂದ ಜಾತ್ರೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿತ್ತು. ಮಹಾರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ- ಹವನಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮಧ್ಯಾಹ್ನದಿಂದ ಸಾವಿರಾರು ಭಕ್ತಾಧಿಗಳು ರಥಕಾಣಿಕೆ ನೀಡಿ ಪೂಜೆ- ಪುನಸ್ಕಾರ ನೆರವೇರಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸoಜೆ 5.30ರ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಾಹಾರಥವನ್ನು ದೇವಸ್ಥಾನದ ಕೆರೆಯ ಸುತ್ತ ಭಕ್ತಾದಿಗಳ ಜಯಘೋಷದೊಂದಿಗೆ ಎಳೆಯಲಾಯಿತು. ಈ ಸಂದರ್ಭದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ತಹಶೀಲ್ದಾರ ಅಶೋಕ ಭಟ್, ದೇವಸ್ಥಾನದ ಟ್ರಸ್ಟಿಗಳು, ಆನಂದ ಶೆಟ್ಟಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು. ದೂರದಿಂದ ಬಂದಿರುವ ಭಕ್ತರ ಹಿತ ಕಾಪಾಡು ದೃಷ್ಟಿಯಲ್ಲಿ ಪೊಲೀಸರು ಉತ್ತಮ ಬಂದೋಬಸ್ತ್ ನೀಡಿದ್ದರು. ಭಕ್ತರ ವಾಹನ ಪಾರ್ಕಿಂಗ್‌ಗಾಗಿ ಪೇ ಎಂಡ್ ಪಾರ್ಕ್ ಸೌಲಭ್ಯ ಒದಗಿಸಲಾಗಿತ್ತು.