• first
  Slide
  Slide
  previous arrow
  next arrow
 • ಪಥ ಸಂಚಲನದ ಪೂರ್ವಭಾವಿ ಜಾಗೃತಿಗಾಗಿ ಬೈಕ್ ರ‍್ಯಾಲಿ

  300x250 AD

  ಸಿದ್ದಾಪುರ: ಆರ್‌ಎಸ್‌ಎಸ್ ವತಿಯಿಂದ ಜ.21ರಂದು ನಡೆಯಲಿರುವ ಪಥಸಂಚಲನದ ಪೂರ್ವಭಾವಿ ಜಾಗೃತಿಗಾಗಿ ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.
  ಬೈಕ್ ರ‍್ಯಾಲಿಗೆ ಡಾ.ಶ್ರೀಧರ ವೈದ್ಯ ಹಾಗೂ ಜಯಂತ್ ಶಾನಭಾಗ್ ಅವರು ಚಾಲನೆ ನೀಡಿದರು. ಬಾಲಿಕೊಪ್ಪದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಹೊರಟ ರ‍್ಯಾಲಿಯು ಕೊಂಡ್ಲಿ, ಹಾಳದಕಟ್ಟಾ, ಹೊಸೂರು, ಎಪಿಎಂಸಿ, ರಾಜಮಾರ್ಗ, ಬಸವಣ್ಣ ಗಲ್ಲಿ, ಭಗತ್ ಸಿಂಗ್ ವೃತ್ತದ ಮೂಲಕ ಶ್ರೀ ಗಂಗಾಮಾತಾ ದೇವಾಲಯಕ್ಕೆ ಬಂದು ಕೊನೆಗೊಂಡಿತು.
  ಈ ವೇಳೆ ಭಜರಂಗದಳದ ಪ್ರಮುಖ ಎ.ಜಿ. ನಾಯ್ಕ ಸ್ವಾಗತಿಸಿದರು. ಹಿಂದೂ ಜಾಗರಣ ವೇದಿಕೆ ಪ್ರಮುಖ ರಘುವೀರ್ ನಾಯ್ಕ ನಿರೂಪಿಸಿದರು. ಸುರೇಶ್ ಶೇಟ್ ವಂದಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ಗಣೇಶ್ ತೆಕ್ಕಟ್ಟೆ, ಪ್ರಮುಖರಾದ ಶಂಕರ್ ನಾಯ್ಕ, ಲಕ್ಷ್ಮಿಕಾಂತ್ ಪೈ, ಗುರುರಾಜ್ ಶಾನಭಾಗ್, ದಿನೇಶ್ ಪಟೇಲ್, ಸಂಜಯ್ ಬೇಡ್ಕಣಿ, ಕಾಶಿನಾಥ್ ಪೈ, ಸತೀಶ್ ಕೊಡಿಯಾ, ವಿನಾಯಕ್ ಮಹಾಲೆ, ಮಾರುತಿ ಬಾಲಿಕೊಪ್ಪ, ಯಶ್ವಂತ ನಾಯ್ಕ, ಶಿವಕುಮಾರ್ ನಾಯ್ಕ ಕೊಂಡ್ಲಿ ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top