ಯಲ್ಲಾಪುರ: ಯುಕೆ ನೇಚರ್ ಸ್ಟೇ ಮೂಲಕ ಯಲ್ಲಾಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಕೆಲಸ ಮಾಡುತ್ತಿದ್ದೇವೆ. 5 ವರ್ಷಗಳ ಹಿಂದೆ ಒಂದು ಕಾಟೇಜ್‌ನಿಂದ ಪ್ರಾರಂಭವಾದ ಯುಕೆ ನೇಚರ್ ಸ್ಟೇ 16 ಕಾಟೇಜ್ ಮೂಲಕ ಏಕಕಾಲಕ್ಕೆ 120 ಅತಿಥಿಗಳನ್ನು ಸತ್ಕರಿಸುವ ಮಟ್ಟಿಗೆ ಬೆಳೆದು ಬಂದಿದೆ ಎಂದು ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಸುಂಗನಮಕ್ಕಿ ಯುಕೆ ನೇಚರ್ ಸ್ಟೇ ಮಾಲಿಕರಾದ ನಿರಂಜನ ಭಟ್ ಹೇಳಿದರು.
ನೇಚರ್ಸ್ ಸ್ಟೇ ರೆಸಾರ್ಟ್ಗಿಂತ ಭಿನ್ನವಾಗಿದೆ. ಇಲ್ಲಿ ಎಲ್ಲವೂ ನೈಸರ್ಗಿಕವಾಗಿರುತ್ತದೆ. ಯುಕೆ ನೇಚರ್ ಸ್ಟೇ ದಲ್ಲಿ ಕೌಟುಂಬಿಕ ಪ್ರವಾಸ, ಮಿತ್ರರು ಕಾಲೇಜು ಸಹಪಾಠಿಗಳು ಆಡಳಿತ ಮಂಡಳಿಯ ಸಭೆಗಳು ನಡೆಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇಲ್ಲಿ ಶಿವಾಜಿ ಸುರತ್ಕಲ್ ಪಾರ್ಟ್2, ಮನ್ಸೂರೇ ನಿರ್ದೇಶನದ 19 20 21 ಚಲನಚಿತ್ರ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಮುಂತಾದ ಚಲನಚಿತ್ರಗಳು ಚಿತ್ರೀಕರಣ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯದ ಬೇರೆಬೇರೆ ಕಡೆಗಳಿಂದ ಸ್ಕೂಲ್ ಟ್ರಿಪ್‌ಗಾಗಿ ವಿದ್ಯಾರ್ಥಿಗಳ ಬರುತ್ತಾರೆ. ಡಿಸ್ಟಿನೇಷನ್ ಮದುವೆಗಳು, ವಿವಾಹಪೂರ್ವ ಫೋಟೋ ಶೂಟಗಳು ನಮ್ಮ ಯುಕೆ ನೇಚರ್ ಸ್ಟೇ ದಲ್ಲಿ ನಡೆಯುತ್ತವೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಡೇ ಔಟ್ ಕಾನ್ಸೆಪ್ಟ್ ಪ್ಯಾಕೇಜ್ ಕೂಡ ನಮ್ಮಲ್ಲಿದೆ. ಆರ್ಟ್ ಆಫ್ ಲಿವಿಂಗ್ ಮೆಡಿಟೇಷನ್ ಶಿಬಿರಗಳನ್ನು ಇಲ್ಲಯೇ ಮಾಡಲಾಗಿದೆ. ಮಕ್ಕಳು ಎರಡು ದಿನಗಳ ಕಾಲ ನಮ್ಮ ನೇಚರ್ ಸ್ಟೇ ಅಲ್ಲಿ ಉಳಿದುಕೊಂಡು ಪರಿಸರದ ಬಗ್ಗೆ ಅಧ್ಯಯನ ಮಾಡುವಂತಹ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು. ಕುಳಿಮಾವು ಜಲಪಾತಕ್ಕೆ ಟ್ರಾಕಿಂಗ್, ಮಾಗೋಡ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಭೇಟಿ, ಸಾಂಸ್ಕೃತಿಕ ಕಾರ್ಯಕ್ರಮ, ಮೀನು ಹಿಡಿಯುವುದು, ಹಕ್ಕಿಗಳ ಛಾಯಾಚಿತ್ರೀಕರಣ, ಹೊರಾಂಗಣ ಜಲ ಕ್ರೀಡೆಗಳು, ರೇನ್ ಡಾನ್ಸ್, ಕ್ಯಾಂಪ್ ಫೈರ್, ನೈಸರ್ಗಿಕ ನೀರಿನ ಹರಿವಿನಲ್ಲಿ ಈಜಾಟ, ದೇಶಿಯ ಆಟಗಳು, ಜಂಗಲ್ ಸೈಕ್ಲಿಂಗ್, ರಿವರ್ ವಾಕ್ ಹಾಗೂ ರೋಪ್ ವೇ ಮುಂತಾದ ಮನರಂಜನೆಯ ಹಲವಾರು ವಿಧಗಳನ್ನು ಯುಕೆ ನೇಚರ್ ಸ್ಟೇ ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದರು.
ಯುಕೆ ನೇಚರ್ ಸ್ಟೇನಲ್ಲಿ ಅತಿಥಿಗಳಾಗಿ ಆಗಮಿಸುವವರು ಒಂದು ವಾರ ಅಥವಾ ಹದಿನೈದು ದಿನಗಳ ಪೂರ್ವದಲ್ಲಿಯೇ ಸ್ಥಳ ಕಾಯ್ದಿರಿಸಬೇಕಾಗುತ್ತದೆ. ಪರಿಚಯಸ್ಥರು ಈ ಹಿಂದೆ ಯುಕೆ ನೇಚರ್ ಸ್ಟೇ ದಲ್ಲಿ ವಾಸ್ತವ್ಯ ಮಾಡಿದವರ ಮೂಲಕ ಆಗಮಿಸುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 9 ಎಕರೆ ಜಂಗಲ್ ಕ್ಯಾಂಪಸ್ ನಲ್ಲಿ, ಉತ್ತಮ ಡೈನಿಂಗ್ ವಿಭಾಗ ಸಭಾ ಭವನ, ಗೋವಾ ಎರಪೋರ್ಟ್ ನಿಂದ 192 ಕಿ.ಮೀ., ಹುಬ್ಬಳ್ಳಿ ಎರ್ ಪೋರ್ಟ್ ಹಾಗೂ ರೈಲ್ವೆ ಸ್ಟೇಷನ್‌ನಿಂದ 72 ಕಿ.ಮೀ, ಬೆಂಗಳೂರಿನಿ0ದ 425 ಕಿ.ಮೀ ಹಾಗೂ ಯಲ್ಲಾಪುರದಿಂದ 12.5 ಕಿ.ಮೀ ದೂರದಲ್ಲಿ ಯುಕೆ ನೇಚರ್ ಸ್ಟೇ ಇದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಯುಕೆ ನೇಚರ್ ಸ್ಟೇ ಸಲಹೆಗಾರರರಾದ ಜಯಂತ್ ಮಾವಳ್ಳಿ ಹಾಗೂ ಸೂರಜ ಹೆಗಡೆ ಇದ್ದು ಮಾಹಿತಿ ನೀಡಿದರು.