• Slide
  Slide
  Slide
  previous arrow
  next arrow
 • ಡಿ.10ರಂದು ‘ಕಬೀರ ಕಂಡಂತೆ’ ಲೋಕಾರ್ಪಣೆ

  300x250 AD

  ಯಲ್ಲಾಪುರ: ಮಾತೃಭೂಮಿ ಸೇವಾ ಪ್ರತಿಷ್ಠಾನ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ಗಳ ಸಹಯೋಗದಲ್ಲಿ ವಿಶ್ರಾಂತ ಪ್ರಾಚಾರ್ಯ ಶ್ರೀರಂಗ ಕಟ್ಟಿ ವಿರಚಿತ ಸಂತ ಕಬೀರದಾಸರ ದೋಹೆಗಳ ಆಧಾರಿತ ‘ಕಬೀರ ಕಂಡಂತೆ’ ಲೋಕಾರ್ಪಣೆ ಸಮಾರಂಭ ಡಿ.10ರಂದು 3.30ಕ್ಕೆ ವಿಶ್ವದರ್ಶನ ಸಭಾಭವನದಲ್ಲಿ ನಡೆಯಲಿದೆ.
  ವಿಶ್ರಾಂತ ಪ್ರಾಧ್ಯಾಪಕ ಡಾ.ಶ್ರೀಪಾದ ಶೆಟ್ಟಿ ಹೊನ್ನಾವರ ಇವರಿಂದ ಕೃತಿ ಬಿಡುಗಡೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಪ್ರಾಚಾರ್ಯ ಡಾ.ದತ್ತಾತ್ರಯ ಗಾಂವಕರ ಕೃತಿ ಪರಿಚಯಿಸಲಿದ್ದಾರೆ. ಹಿರಿಯ ಸಾಹಿತಿ ವನರಾಗ ಶರ್ಮಾ, ವಿಶ್ವದರ್ಶನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ, ಯಲ್ಲಾಪುರ ಕಸಾಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಅಭಾಸಾಪ ಉಪಾಧ್ಯಕ್ಷ ಗಣಪತಿ ಕಂಚೀಪಾಲ, ವ್ಯಂಗ್ಯ ಚಿತ್ರಕಾರ ಸತೀಶ ಯಲ್ಲಾಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top