• Slide
    Slide
    Slide
    previous arrow
    next arrow
  • ಗುರುಮಾತೆಯ ಜನ್ಮದಿನ; ಶಾಲೆಗೆ ಸುಣ್ಣಬಣ್ಣ ಬಳಿದ ಹಳೆ ವಿದ್ಯಾರ್ಥಿಗಳು

    300x250 AD

    ದಾಂಡೇಲಿ: ತಾಲೂಕಿನ ಬರ್ಚಿ ಹತ್ತಿರದ ಗೋಬ್ರಾಳದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪುಷ್ಪ ಶೇಠ್ ಅವರಿಂದ ಹಳೆದಾಂಡೇಲಿಯ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕಲಿತ ಹಳೆವಿದ್ಯಾರ್ಥಿಗಳು ಗೋಬ್ರಾಳದ ಶಾಲೆಗೆ ಸುಣ್ಣ ಬಣ್ಣ ಬಳಿದು ಶೃಂಗಾರಗೊಳಿಸುವ ಮೂಲಕ ಕಲಿತ ಗುರುಮಾತೆಯ ಮನವಿಗೆ ಸ್ಪಂದಿಸಿ, ಶೈಕ್ಷಣಿಕ ಕಾಳಜಿ ಮೆರದಿದ್ದಾರೆ.
    ಪುಷ್ಪ ಶೇಠ್ ಅವರು ಜನ್ಮದಿನದಂದೆ ನಿವೃತ್ತರಾಗಿದ್ದು, ಹಳೆ ವಿದ್ಯಾರ್ಥಿಗಳಾದ ಸೀತಾಕಾಂತ ಮೇಸ್ತಾ, ಸಂತೋಷ್ ಚೌವ್ಹಾನ್, ಬೀನಾ ಸಿಂಗ್, ತಬಿತಾ ಮೊದಲಾದವರು ಸೇರಿ ಶಾಲೆಗೆ ಸುಣ್ಣಬಣ್ಣ ಬಳಿದು ಅಂದಗೊಳಿಸಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳಿಂದ ಬಣ್ಣ ಹಚ್ಚುವ ಕಾರ್ಯವನ್ನು ಆರಂಭಿಸಲಾಗಿದ್ದು, ಸೋಮವಾರ ಯಶಸ್ವಿಯಾಗಿ ಸಂಪನ್ನಗೊ0ಡಿತು. ಕಲಾವಿದರಾಗಿರುವ ಸೀತಾಕಾಂತ ಮೇಸ್ತರವರು ಅವರು ಸ್ವತಃ ತನ್ನ ಸಹದ್ಯೋಗಿಗಳೊಂದಿಗೆ ಸುಣ್ಣ ಬಣ್ಣವನ್ನು ಉಚಿತವಾಗಿ ಹಚ್ಚಿ ನಿಜವಾದ ಗುರುಭಕ್ತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಗಳನ್ನು ವಿತರಿಸಲಾಯಿತು.
    ಅಂದು ಕಲಿಸಿದ ಸೇವೆಯನ್ನು ಸ್ಮರಿಸಿ ಹಳೆ ವಿದ್ಯಾರ್ಥಿಗಳು ಸಲ್ಲಿಸಿದ ಈ ಸೇವೆ ನಿಜವಾಗಿಯೂ ಸಾರ್ಥಕತೆಯೆ ಸೇವೆ ಎಂದು ಪುಷ್ಪಾ ಶೇಠ್ ಅವರು ಹಳೆ ವಿದ್ಯಾರ್ಥಿಗಳ ಕಾರ್ಯವನ್ನು ಹಳೆವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಲು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ವಿದ್ಯಾ ಶೆಟ್ಟಿ, ಚಂದ್ರಕಲಾ, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top