ಅಂಕೋಲಾ: ಬಡ ಬಗ್ಗರ ಕಷ್ಟಕ್ಕೆ ಸ್ಪಂದಿಸಲು ದೊಡ್ಡ ಹುದ್ದೆ ಬೇಕಂತಿಲ್ಲ ಬದಲಾಗಿ ಸಹಾಯ ಮಾಡುವ ಮನಸ್ಥಿತಿ ಮುಖ್ಯ, ಯಾರೇ ಕಷ್ಟವಿದ್ದರು ಅವರು ನಮ್ಮವರು ಎಂಬ ಭಾವನೆ ತೋರಿ ಅವರ ಸಮಸ್ಯೆಯನ್ನು ಬಗೆಹರಿಸುವ ಕಾರ್ಯವಾದಲ್ಲಿ ಮಾತ್ರ ಸಾರ್ವಜನಿಕ ಜೀವನದಲ್ಲಿ ಮಾನ್ಯತೆ ಹಾಗೂ ಪದೋನ್ನತಿ ದೊರೆಯಲು ಸಾಧ್ಯ ಎಂದು ಬಾಗಲಕೋಟ ಭೂಸ್ವಾದೀನ ಉಪವಿಭಾಗಾಧಿಕಾರಿ ಉದಯ ಕುಂಬಾರ ಹೇಳಿದರು.
ಅವರು ತಾಲೂಕಿನ ಗೋಖಲೆ ಸೆಂಟನರಿ ಕಾಲೇಜಿ ವತಿಯಿಂದ ಹಮ್ಮಿಕೊಂಡ ಆಡಳಿತ ಕೌಶಲ್ಯಗಳ ಕಾರ್ಯಾಗಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮನ್ನು ಹೊತ್ತ ಭೂಮಿ, ಜನ್ಮ ಕೊಟ್ಟತ್ತ ತಂದೆ-ತಾಯಿ, ವಿದ್ಯೆಕೊಟ್ಟಂತ ಗುರುಗಳು ನಿಜವಾದ ದೇವರುಗಳು ಎಲ್ಲರನ್ನು ಗೌರವಿಸಿ ಬದುಕಬೇಕು ಹಾಗೆಯೇ ತಾವು ಕಲಿತಂತ ಶಾಲೆಗೆ ಏನನ್ನಾದರೂ ಕೊಡುಗೆ ನೀಡಿ ಮುಂದಿನ ಪೀಳಿಗೆಯವರಿಗೆ ಸಹಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗೋಖಲೆ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸುಜಾತಾ ಲಾಡ್ ಮಾತನಾಡಿ ಎಲ್ಲರೊಂದಿಗೂ ಸಂಯಮದಿಂದ ವರ್ತಿಸಿ ಸಮಸ್ಯೆಗಳನ್ನು ಬಗೆಹರಿಸುವ ತಹಶೀಲ್ದಾರ್ ಉದಯ ಕುಂಬಾರ ತಾಲೂಕಿನ ನೆಚ್ಚಿನ ಅಧಿಕಾರಿಯಾಗಿದ್ದರು ಅವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಹೇಳಿದರು.
ಗೋಖಲೆ ಸೆಂಟನರಿ ಕಾಲೇಜಿನ ಪ್ರಬಾರಿದಲ್ಲಿ ಪ್ರಾಚಾರ್ಯ ಡಿ.ಪಿ ಕುಚಿನಾಡ್ ಉಪನ್ಯಾಸಕ ವಿ ಎಂ ನಾಯ್ಕ, ಎಂ.ಎಂ.ಪಾಟೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ವಿ.ವಸ್ತ್ರದ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿ ಅಪೂರ್ವಾ ನಾಯಕ ಕಾರ್ಯಕ್ರಮವನ್ನು ನಿರೂಪಿಸಿದರು, ಸುಚೇತಾ ವಂದಿಸಿದರು.