ಮುಂಡಗೋಡ: ನಾಗರಿಕ ಹಕ್ಕು ಸರಂಕ್ಷಣಾ ಅಧಿನಿಯಮ 1995 ಹಾಗೂ ನಾಗರಿಕ ಹಕ್ಕು ಸಂರಕ್ಷಣಾ ನಿಯಮಗಳು 1977 ಮತ್ತು ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ (ದೌರ್ಜನ್ಯ ಪ್ರಬಂಧ) ಅಧಿನಿಯಮ 1989 ಹಾಗೂ 1995ರ ಅಡಿ ಅಸ್ಪೃಶ್ಯತಾ ನಿರ್ಮೂಲನೆಗಾಗಿ ಹಾಗೂ ಇಲಾಖೆ ಯೋಜನೆಗಳ ಬಗ್ಗೆ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಹಾಗೂ ಬಸ್ ನಿಲ್ದಾಣದಲ್ಲಿ ಬೀದಿ ನಾಟಕ ಹಾಗೂ ಕಲಾ ಜಾಥಾದ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಯಿತು.
ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಇಂದಿರಾ ಬಾಗಲಕೊಟೆ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದವರಿಗೆ ಸಮಾಜದಲ್ಲಿ ಸಮಾನತೆ ಹಕ್ಕು ದೊರಕುತ್ತಿರಲಿಲ್ಲ. ಅದರಿಂದ ಅಂಬೇಡ್ಕರ ಅವರು, ಸಮಾಜದಲ್ಲಿ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಬೇಕು, ಎಲ್ಲರಂತೆ ಸಮಾನ ಹಕ್ಕು ದೊರಕಬೇಕು ಎಂದು ಸಂವಿಧಾನ ರಚನೆ ಮಾಡಿದರು. ಆದರೆ ಈಗಲೂ ಹಳ್ಳಿಗಳಲ್ಲಿ ಕೆಳಮಟ್ಟದ ಜಾತಿಗಳನ್ನು ಕೀಳು ಮಟ್ಟದ ದೃಷ್ಟಿಕೋನದಿಂದ ನೋಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಪವಾರ, ಬಸವರಾಜ ಸಂಗಮೇಶ ಇದ್ದರು.