Slide
Slide
Slide
previous arrow
next arrow

ಅರೆ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಸಂದರ್ಶನ

300x250 AD

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕ್ರಿಮ್ಸ್) 2022– 23ನೇ ಸಾಲಿನ ಅರೆ ವೈದ್ಯಕೀಯ ವಿವಿಧ ಕೋರ್ಸ್ ಪ್ರವೇಶಾತಿ ಪ್ರಕ್ರಿಯೆಯು ನಡೆಯುತ್ತಿದ್ದು, ಪ್ಯಾರಾಮೆಡಿಕಲ್ ಬೋರ್ಡ್ನವರು ನಡೆಸಿದ ಮೊದಲನೇಯ ಸುತ್ತಿನ ಆಯ್ಕೆ ಪ್ರಕ್ರಿಯೆಯಲ್ಲಿ 83 ವಿದ್ಯಾರ್ಥಿಗಳು ಸಂಸ್ಥೆಯ ವಿವಿಧ ಅರೆವೈದ್ಯಕೀಯ ಕೋರ್ಸಗಳಲ್ಲಿ ಪ್ರವೇಶಾತಿ ಪಡೆದಿದ್ದಾರೆ.
ಇನ್ನುಳಿದ 57 ಸೀಟುಗಳ ಪ್ರವೇಶಾತಿಗಾಗಿ ಪ್ಯಾರಾಮೆಡಿಕಲ್ ಬೋರ್ಡ್ ನಡೆಸುವ ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆಯು ನ.11ರಿಂದ 19ರವರೆಗೆ ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯ, ವಿಕ್ಟೋರಿಯಾ ಆಸ್ಪತ್ರೆ ಆವರಣ, ಕೆ.ಆರ್.ರಸ್ತೆ, ಬೆಂಗಳೂರು– 560 002ನಲ್ಲಿ ನೇರ ಸಂದರ್ಶನವನ್ನು ನಿಗದಿಪಡಿಸಿದ್ದು, ಆಸಕ್ತ ವಿದ್ಯಾರ್ಥಿಗಳು ಆಫ್‌ಲೈನ್ ಸಂದರ್ಶನದಲ್ಲಿ ಪಾಲ್ಗೊಳ್ಳಲು ಸೂಚಿಸಿದೆ. ಹೆಚ್ಚಿನ ಮಾಹಿತಿಯನ್ನು https://www.pmbkarnataka.org ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top