Slide
Slide
Slide
previous arrow
next arrow

ವಿದ್ಯುತ್ ಗುತ್ತಿಗೆದಾರರಿಂದ ದಿ.ವಿನೋದ ಪಾಟೀಲ್’ಗೆ ಶೃದ್ಧಾಂಜಲಿ

300x250 AD

ಯಲ್ಲಾಪುರ: ವಿದ್ಯುತ್ ಗುತ್ತಿಗೆದಾರ ವಿನೋದ ಪಾಟೀಲ್ ನಿಧನಕ್ಕೆ ಗುರುವಾರ ಪಟ್ಟಣದ ವಿದ್ಯುತ್ ಗುತ್ತಿಗೆದಾರರ ಸಂಘದ ಸಭಾಭವನದಲ್ಲಿ ಸಭೆ ನಡೆಸಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ, ವಿನೋದ ಪಾಟೀಲ್ ವಿದ್ಯುತ್ ಗುತ್ತಿಗೆದಾರರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಅಕಾಲಿಕ ನಿಧನದಿಂದ ಸಂಘಕ್ಕೆ ಸಮಾಜಕ್ಕೆ ನಷ್ಟ ಉಂಟಾಗಿದೆ ಎಂದರು.
ಗುತ್ತಿಗೆದಾರ ಶಾಂತಾರಾಮ ಹೆಗಡೆ ಮಾತನಾಡಿ, ಹುಟ್ಟು ಆಕಸ್ಮಿಕ ಸಾವು ಖಚಿತ. ನಡುವೆ ಸಮಾಜಕ್ಕೆ ನಾವು ಮಾಡಿದ ಸೇವೆ ಮಾತ್ರ ನೆನಪಿನಲ್ಲಿ ಉಳಿಯಬಲ್ಲದು. ವಿನೋದ ಪಾಟೀಲರ ಅಕಾಲಿಕ ಅಗಲಿಕೆ ನೋವು ತಂದಿದೆ ಎಂದರು.
ಪತ್ರಕರ್ತರಾದ ಸುಬ್ರಾಯ ಬಿದ್ರೆಮನೆ, ಜಯರಾಜ ಗೋವಿ, ಗುತ್ತಿಗೆದಾರರಾದ ಗೋಪಾಲಕೃಷ್ಣ ಕರುಮನೆ, ವಿ.ಕೆ.ಭಟ್ಟ ಶೀಗೆಪಾಲ, ದಾದಾಫಿರ್ ಹನುಮಸಾಗರ, ದಿನೇಶ ರೇವಣಕರ್, ವಿನಯ ಹೆಗಡೆ, ವಿಶ್ವನಾಥ ಕರುಮನೆ, ನಾಗರಾಜ ಕೊರ್ನಳ್ಳಿ, ಪ್ರಶಾಂತ ಮಹೇಕರ್, ರೀಗನ್ ಡಿಸೋಜಾ, ಜಾಫರ್, ರಾಮಚಂದ್ರ ಮುಂತಾದವರು ಶೃದ್ಧಾಂಜಲಿ ಸಲ್ಲಿಸಿದರು.

300x250 AD
Share This
300x250 AD
300x250 AD
300x250 AD
Back to top