• Slide
    Slide
    Slide
    previous arrow
    next arrow
  • ಅಪಘಾತದಿಂದ ಭಯಗೊಂಡ ಬಾಲಕ ಹೃದಯಾಘಾತದಿಂದ ಮೃತ

    300x250 AD

    ಭಟ್ಕಳ: ಬಾಲಕನೋರ್ವ ಬೈಕ್ ಅಪಘಾತದಿಂದಾಗಿ ಹೆದರಿದ ಪರಿಣಾಮ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಭಟ್ಕಳದಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಈತನ ಬೈಕ್ ಬೇರೊಬ್ಬರ ಬೈಕ್ ಗೆ ತಾಗಿದ್ದು, ಈತ ಚಲಾಯಿಸುತ್ತಿದ್ದ ಬೈಕ್ ಕೆಳಗೆ ಬಿದ್ದಿದ್ದು, ಬೈಕನ್ನು ಎತ್ತಿ ನಿಲ್ಲಿಸುವ ವೇಳೆ ಜನರು ಸೇರಿಕೊಂಡಿದ್ದಾರೆ.

    ಇದರಿoದ ಹೆದರಿಕೊಂಡ ಬಾಲಕ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬಾಲಕ ಆಗಲೇ ಮೃತಪಟ್ಟಿದ್ದ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದ ಅಬ್ದುಲ್ಲಾ ಆಫ್ರಿಕಾ (14) ಮೃತಪಟ್ಟ ವಿದ್ಯಾರ್ಥಿ. ಮೃತ ವಿದ್ಯಾರ್ಥಿಯ ತಂದೆ ಸೌದಿ ಅರೆಬಿಯಾದಲ್ಲಿ ಉದ್ಯೋಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top