Slide
Slide
Slide
previous arrow
next arrow

ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಹರಿದ ಟ್ರಕ್

300x250 AD

ಕಾರವಾರಹಿಂಬದಿಯಿoದ ಬಂದ ಟ್ರಕ್ ಒಂದು ಬೈಕ್ ಒಂದಕ್ಕೆ ಡಿಕ್ಕಿ ಹೊಡೆದು ಬೈಕ್ ನ ಮೇಲೆ ಕುಳಿತಿದ್ದವನ ಕಾಲಿನ ಮೇಲೆ ಹರಿದ ಘಟನೆ ಇಲ್ಲಿನ ನಗರದ ಮಯೂರ ವರ್ಮ ವೇದಿಕೆಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಟ್ರಕ್ ಚಾಲಕ ಅಪಘಾತಪಡಿಸಿ ಟ್ರಕ್ಕನ್ನು ನಿಲ್ಲಿಸದೇ ಗೋವಾ ಕಡೆಗೆ ತೆರಳಿದ್ದು ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದುರ್ಘಟನೆಯಲ್ಲಿ ತಾಲೂಕಿನ ಸದಾಶಿವಗಡ ಮೂಲದ ಗಜಾನನ ಪೈ ಎಂಬುವವರಿಗೆ ಬಲವಾದ ಪೆಟ್ಟುಬಿದ್ದಿದೆ.

ಶುಭಂ ಗಜಾನನ ಪೈ ಎಂಬಾತ ತನ್ನ ತಂದೆ ಗಜಾನನ ಪೈ ಅವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಸದಾಶಿವಗಡದ ಕಡೆಗೆ ತೆರಳವಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಅಪಘಾತವಾಗಿ ಅರ್ಧ ಗಂಟೆಗೂ ಅಧಿಕ ಕಾಲವಾದರೂ 108 ಅಂಬ್ಯುಲೆನ್ಸ್ ಬರದೇ ಗಾಯಳು ನರಳಾಡಿದ್ದಾರೆ. ಈ ವೇಳೆ ಮಂಗಳೂರಿನಿoದ ಮರಳುತ್ತಿದ್ದ ಗೋವಾದ ಮಣಿಪಾಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೈದ್ಯರೊಬ್ಬರು ತಾನೇ ಮುಂದಾಗಿ ನಿಂತು ರಸ್ತೆಯಲ್ಲೇ ಅಪಘಾತಕೀಡಾದ ವ್ಯಕ್ತಿಗೆ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top