Slide
Slide
Slide
previous arrow
next arrow

ಶ್ರೀನಾರಾಯಣಗುರು ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ

300x250 AD

ಅಂಕೋಲಾ: ಸಮಸ್ತ ಈಡಿಗ ಜನಾಂಗಕ್ಕೆ ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪಿಸುವುದರ ಬದಲು ‘ಕೋಶ’ ಸ್ಥಾಪಿಸಲಾಗಿದೆ. ಇದನ್ನು ಹಿಂಪಡೆದು ಸರಕಾರ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಶ್ರೀ ನಾರಾಯಣಗುರು ವೇದಿಕೆ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ಕೆಲ ವರ್ಷಗಳಿಂದ ಸಮಾಜದ ವಿವಿಧ ಸಂಘಟನೆಗಳು ಮತ್ತು ಮಠಾಧೀಶರು ಶ್ರೀನಾರಾಯಣಗುರು ಅಭಿವೃದ್ಧಿ ನಿಗಮ- ಮಂಡಳಿ ಸ್ಥಾಪಿಸುವಂತೆ ಹೋರಾಡುತ್ತಲೇ ಬಂದಿದ್ದಾರೆ. ಆದರೆ ಸರಕಾರ ಇದನ್ನು ಜಾರಿಗೊಳಿಸಿಲ್ಲ. ಇದರ ಬದಲಾಗಿ ಸರಕಾರ ಈಗ ಉಪಯೋಗಕ್ಕೆ ಬಾರದ ‘ಶ್ರೀ ನಾರಾಯಣಗುರು ಕೋಶ’ ಸ್ಥಾಪಿಸಿ ಆದೇಶ ಹೊರಡಿಸಿದೆ. ಇದರಿಂದ 26 ಪಂಗಡಗಳನ್ನು ಒಳಗೊಂಡ ನಮ್ಮ ಈಡಿಗ ಸಮುದಾಯಕ್ಕೆ ಯಾವುದೇ ಹೇಳುವಂತ ಪ್ರಯೋಜನವಾಗುವಂತಿಲ್ಲ. ಹೀಗಾಗಿ ಇದನ್ನು ರದ್ದುಪಡಿಸಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ತಾಲೂಕು-ಜಿಲ್ಲೆಯಲ್ಲಿಯೂ ಹೋರಾಟ ನಡೆಯಲಿದೆ. ಜನವರಿ 6ರಿಂದ ಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿಯವರು ಇಂತಹ ಅನೇಕ ಯೋಜನೆಗಳನ್ನು ಜಾರಿಗೊಳಿಸುವಂತೆ ಮಂಗಳೂರಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಕೈಗೊಂಡಿದ್ದು ನಾವು ಕೂಡ ಬೆಂಬಲಿಸಲಿದ್ದೇವೆ. ಹೀಗಾಗಿ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ತಾಲೂಕು ನಾಮಧಾರಿ ಆರ್ಯ ಈಡಿಗ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ನಿಗಮ ಮಂಡಳಿಯಿಂದ ಆಗುವ ಪ್ರಯೋಜನದ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಶ್ರೀನಾರಾಯಣಗುರು ವೇದಿಕೆಯ ಅಧ್ಯಕ್ಷ ನಾಗರಾಜ ಮಂಜಗುಣಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕೆ. ನಾಯ್ಕ ಬೆಳಂಬಾರ, ಪ್ರಮುಖರಾದ ವಿಶ್ವನಾಥ ಟಿ. ನಾಯ್ಕ, ಜಯ ಬಾಲಕೃಷ್ಣ ನಾಯ್ಕ, ತಾರಾ ನಾಯ್ಕ, ಶ್ರೀಧರ ನಾಯ್ಕ, ಮಂಜುನಾಥ ಎಸ್.ನಾಯ್ಕ, ಪುರುಷೋತ್ತಮ ನಾಯ್ಕ, ಸುರೇಶ ನಾಯ್ಕ, ರಾಜೇಶ ಮಿತ್ರಾ ನಾಯ್ಕ, ಗಣಪತಿ ನಾಯ್ಕ, ವೆಂಕಟರಮಣ ಕೆ. ನಾಯ್ಕ, ಅರುಣ ನಾಯ್ಕ ಸೇರಿದಂತೆ ಇತರರು ಉಪಸ್ಥಿತರಿದ್ದರು. ತಹಶೀಲ್ದಾರರ ಪರವಾಗಿ ಶಿರಸ್ತೇದಾರ ಗಿರೀಶ ಬಾನಾವಳಿಕರ ಮನವಿ ಸ್ವೀಕರಿಸಿದರು.

300x250 AD
Share This
300x250 AD
300x250 AD
300x250 AD
Back to top