• Slide
    Slide
    Slide
    previous arrow
    next arrow
  • ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಮಹೇಶ ನಾಯಕ ಆಯ್ಕೆ

    300x250 AD

    ಅಂಕೋಲಾ: ಕ್ರಿಯಾಶೀಲ ವ್ಯಕ್ತಿತ್ವ, ಶಿಕ್ಷಣ, ಸಾಹಿತ್ಯ ಹಾಗೂ ಆಧ್ಯಾತ್ಮ, ಯಕ್ಷಗಾನ, ಸಾಮಾಜಿಕ ಚಟುವಟಿಕೆಯ ಮೂಲಕ ಲವಲವಿಕೆಯಿಂದ ಗುರುತಿಸಿಕೊಂಡಿದ್ದ ಸಗಡಗೇರಿಯ ಮಹೇಶ ನಾಯಕ ಅವರನ್ನು ಶಿಕ್ಷಣ ಕ್ಷೇತ್ರದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
    ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದ ಸಗಡಗೇರಿಯ ಮಹೇಶ ನಾಯಕ ಅವರು ಇತಿಹಾಸ ವಿಷಯದಲ್ಲಿ ಎಮ್‌ಎ ಸ್ನಾತಕೋತ್ತರ ಪದವಿ ಪೂರೈಸಿದ್ದ ಮಹೇಶ, 1986ರಲ್ಲಿ ಪ್ರೌಢಶಾಲೆಯ ಶಿಕ್ಷಕರಾಗಿ ನೇಮಕವಾದರು. ತಮ್ಮ ವೃತ್ತಿಯನ್ನು ಅತ್ಯಂತ ಉತ್ಸಾಹ ಹಾಗೂ ಮಾದರಿ ಎನ್ನುವಂತೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತ 2020ರಲ್ಲಿ ಸೇವಾ ನಿವೃತ್ತಿಯಾದರು.
    ಮಹೇಶ ನಾಯಕ ಅವರು ತಮ್ಮ ಸೇವೆಯುದ್ದಕ್ಕೂ ಅವಿಶ್ರಾಂತವಾಗಿ ದುಡಿದ ಕರ್ಮಯೋಗಿ ಎಂದರೆ ತಪ್ಪಾಗಲಾರದು. ಆಧ್ಯಾತ್ಮದ ಮೂಲಕ ಸಾಧನೆ ಪ್ರದರ್ಶಿಸುತ್ತ 1994ರಲ್ಲಿ ಮೈಸೂರಿನ ರಾಮಕೃಷ್ಣ ಆಶ್ರಮದ ನೈತಿಕ ಮತ್ತು ಆಧ್ಯಾತ್ಮಿಕ ಕೇಂದ್ರದಲ್ಲಿ 2 ವರ್ಷಗಳ ಕಾಲ ತರಬೇತಿ ಪಡೆದು ಸೇವಾಪತ್ರ ಪಡೆದ ಕಿರ್ತಿ ಇವರದ್ದಾಗಿದೆ.
    ನೂರಕ್ಕೂ ಹೆಚ್ಚು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾದರಸದಂತೆ ಗುರುತಿಸಿಕೊಂಡ ಮಹೇಶ ನಾಯಕ ಅವರನ್ನ ಅನೇಕ ಗೌರವಗಳು ಅರಸಿ ಬಂದಿದೆ. ಅಗ್ರಗೋಣದ ಅರಿವು ಬಳಗದ ಖಜಾಂಚಿಯಾಗಿ, ಸ್ವಚ್ಛ ನಮ್ಮೂರು– ವೃಕ್ಷರಕ್ಷಾ– ಜಲಬಂಧ- ಪ್ಲಾಸ್ಟಿಕ್ ನಿಷೇಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತ ಮಾದರಿಯಾದವರು ಮಹೇಶ ನಾಯಕ.
    2018ರಲ್ಲಿ ಲಯನ್ಸ್ ಕ್ಲಬ್ ಗೋಕರ್ಣದ ಸಕ್ರಿಯ ಸದಸ್ಯರಾಗಿ ಅನೇಕ ವಿದಾಯಕ ಕಾರ್ಯಕ್ರಮಗಳನ್ನು ರೂಪಿಸಿದ ಕಿರ್ತಿ ಇವರದ್ದಾಗಿದೆ. ಯಕ್ಷಪ್ರೇಮಿಯಾಗಿರುವ ಮಹೇಶ ನಾಯಕ ಅವರು ತಮ್ಮ ಸ್ವಂತ ಕೊಡುಗೆಯಲ್ಲಿ ವಿದ್ಯಾರ್ಥಿಗಳಿಗೆ ಯಕ್ಷ ತರಬೇತಿ ನೀಡುತ್ತ ಯಕ್ಷ ದಾಹೋಸಕ್ಕೆ ನಿಂತವರು. ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ತನ್ನ ಕೊಡುಗೆಯಿಂದಲೇ ಪೌರಾಣಿಕ ಯಕ್ಷಗಾನವನ್ನು ಸಂಘಟಿಸುತ್ತ ಗ್ರಾಮೀಣ ಜಾನಪದದ ಕಲೆಗೆ ಶ್ರಮಿಸುತ್ತ ಅಪೂರ್ವ ವ್ಯಕ್ತಿತ್ವದವರಾಗಿ ಗುರುತಿಸಿಕೊಂಡಿದ್ದಾರೆ.

    ನನ್ನ ಸಾಧನೆಗೆ ನನ್ನ ತಂದೆ ರಾಮಚಂದ್ರ ನಾಯಕ ಪ್ರೇರಣೆಯಾಗಿದ್ದಾರೆ. ಪ್ರಶಸ್ತಿ ಬಂದಿರುವ ವಿಷಯ ಕೇಳಿ ತುಂಬಾನೆ ಸಂತೋಷವಾಗಿದೆ. ನನ್ನ ಸಾಹಿತ್ಯ ಹಾಗೂ ಶಿಕ್ಷಣದ ವ್ಯವಸಾಯಕ್ಕೆ ಈ ಪ್ರಶಸ್ತಿ ಪ್ರೇರಣೆಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮಹೇಶ ನಾಯಕ ಹೇಳಿದರು .

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top