ಕುಮಟಾ: ಮಾಹಿತಿ ನೆಪದಲ್ಲಿ ರೈತರನ್ನು ಪದೇ ಪದೆ ಕಚೇರಿಗೆ ಅಲೆದಾಡಿಸದೇ ಸಂಪೂರ್ಣ ಮಾಹಿತಿಯನ್ನು ಒಂದೇ ಬಾರಿ ದಾಖಲಿಸಿಕೊಂಡು, ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ಒದಗಿಸಿಕೊಡುವ ಕಾರ್ಯವಾಗಬೇಕೆಂದು ತಾಪಂ ಇಒ ನಾಗರತ್ನಾ ನಾಯಕ ಅವರು ಕೃಷಿ ಸಹಾಯಕ ನಿರ್ದೇಶಕ ರಶ್ಮೀ ಶಹಪುರಮಠ ಅವರಿಗೆ ಸೂಚಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ತಾಪಂ ಆಡಳಿತಾಧಿಕಾರಿ ಎನ್ ಜಿ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ತಾಪಂ ಇಒ ನಾಗರತ್ನಾ ನಾಯಕ ಅವರು ಮಾತನಾಡಿದರು. ಕೃಷಿಯ ಇಲಾಖೆಯ ಬಗ್ಗೆ ಚರ್ಚೆ ನಡೆದಾಗ, ಮಳೆ ಹಾನಿಯ ಬಗ್ಗೆ ಜಂಟಿ ಸಮೀಕ್ಷೆ ನಡೆಸಿ, ವರದಿ ಕಂದಾಯ ಇಲಾಖೆಗೆ ಕಳುಹಿಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿಯವರು ಸಭೆಗೆ ತಿಳಿಸಿದರು. ಎನ್‌ಆರ್‌ಇಜಿ ಯೋಜನೆಯ ಪ್ರಗತಿ ಸಾಧಿಸಬೇಕೆಂದು ಇಲಾಖೆಗೆ ತಾಪಂ ಇಒ ಸೂಚಿಸಿದರು.
ಸೆ 28 ರಂದು ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಸಾಕು ಹಾಗೂ ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗುವು ಎಂದು ಪಶುಶಂಕೋಪನಾ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ ಹೆಗಡೆ ಸಭೆಯಲ್ಲಿ ತಿಳಿಸಿದರು. ಪುಣ್ಯ ಕೋಟಿ ದತ್ತು ಯೋಜನೆ ಅಡಿ ಪಶುಗಳನ್ನು ದತ್ತು ಪಡೆಯುವವರಿಗೆ ಪ್ರೋತ್ಸಾಹ ನೀಡಬೇಕೆಂದು ತಾಪಂ ಆಡಳಿತಾಧಿಕಾರಿ ಎನ್ ಜಿ. ನಾಯಕ ಸಲಹೆ ನೀಡಿದರು.
ಅಡಿಕೆ ಕೊಳೆ ರೋಗದ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವಣೆ ನೀಡಲಾಗಿದೆ ಎಂದು ತೋಟಗಾರಿಕಾ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಸಭೆಗೆ ಬರುವಾಗ ಸಂಪರ್ಣ ಮಾಹಿತಿಯೊಂದಿಗೆ ಬರಬೇಕು. ಸದ್ಯ ಊರಕೇರಿಯಲ್ಲಿ ನಡೆದ ಅಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಪರಿಹಾರಕ್ಕೆ ಸಂಬAಧಿಸಿದAತೆ ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ಮುಜುಗರ ಎದುರಿಸಬೇಕಾಯಿತು ಎಂದು ಇಒ ನಾಗರತ್ನಾ ನಾಯಕ ತೋಟಗಾರಿಕಾ ಇಲಾಖೆಯ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ತೋರ್ಕೆ ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆಗೆ ಬಿದ್ದಿರುವ ಗುಂಡಿಗಳಲ್ಲಿ ನೀರಿನಿಂದ ಗಟ್ಟಿಯಾದ ಸಿಮೆಂಟ್ ಒಡೆದು ಹೊಂಡ ಮುಚ್ಚುವ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಸ್ಥಳೀಯರು ಇದನ್ನು ಕಂಡು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇದನ್ನು ಗಮನಿಸಿ ದುರಸ್ತಿಕಾರ್ಯ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಎಇಇ ಸುದರ್ಶನ ಅವರಿಗೆ ಇಒ ತಿಳಿಸಿದರು. 19 ಪ್ರಕೃತಿ ವಿಕೋಪ ಕಾಮಗಾರಿಗಳಲ್ಲಿ 15 ಕಾಮಗಾರಿಗಳನ್ನು ಪೂರ್ತಿಗೊಳಿಸಲಾಗಿದೆಯೆಂದು ಸುದರ್ಶನ ಸಭೆಯಲ್ಲಿ ತಿಳಿಸಿದರು.
ತಾಲೂಕಿನ 25 ಶಾಲೆಗಳನ್ನು ವಿವಿಧ ಇಲಾಖೆಯ ಅಧಿಕಾರಿಗಳು ದತ್ತು ಪಡೆದುಕೊಂಡಿದ್ದಾರೆ. ಇದರಿಂದ ಶಿಕ್ಷಣದ ಮಟ್ಟ ಸುಧಾರಿಸಲಿದೆ. ಅಲ್ಲದೇ ಶಾಲೆಯ ಪರಿಸರ ಉತ್ತಮಗೊಳ್ಳಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಇಒ ನಾಗರತ್ನಾ ನಾಯಕ ಅಧಿಕಾರಿಗಳಿಗೆ ಕರೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ, ನೀರು ಸರಬುರಾಜು ಯೋಜನೆ, ಶಿಶು ಅಭಿವೃದ್ಧಿ, ಅರಣ್ಯ, ಆರೋಗ್ಯ, ಜಿಪಂ ಇಂಜಿನಿಯರಿAಗ್ ವಿಭಾಗ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಮಾಹಿತಿ ನೀಡಿದರು.