Slide
Slide
Slide
previous arrow
next arrow

ಲಯನ್ಸ್ ಅಂತರ ಜಿಲ್ಲಾ ಕ್ಲಬ್ ಟ್ವಿನ್ನಿಂಗ್ ಕಾರ್ಯಕ್ರಮ

300x250 AD

ಶಿರಸಿ: ಕ್ಲಬ್ ಟ್ಟಿನ್ನಿಂಗ್ ಕಾರ್ಯಕ್ರಮವು ಎರಡು ಕ್ಲಬ್ ನಡುವೆ ಪರಸ್ಪರ ವಿಚಾರ ವಿನಿಮಯ ಮತ್ತು ಸ್ನೇಹ ಸಂವರ್ಧನೆಯ ಸಮನ್ವಯ ಕಾರ್ಯಕ್ರಮವಾಗಿದೆ. ಇಂತಹ ಒಂದು ವಿಶಿಷ್ಟವಾದ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಶಿರಸಿಯು ಲಯನ್ಸ್ ಕ್ಲಬ್ ಮೂಡಿಗೆರೆಯೊಂದಿಗೆ ಲಯನ್ಸ್ ಸಭಾಭವನದಲ್ಲಿ ಹಮ್ಮಿಕೊಂಡಿತ್ತು. ಶಿರಸಿ ಕ್ಲಬ್ ಲಯನ್ಸ್ ಜಿಲ್ಲೆ 317 ಬಿ ಮತ್ತು ಮೂಡಿಗೆರೆ ಕ್ಲಬ್ ಜಿಲ್ಲೆ 317 ಡಿಯ ಕ್ಲಬ್ ಆಗಿದ್ದರಿಂದ ಇದು ಅಂತರ ಜಿಲ್ಲಾ ಕಾರ್ಯಕ್ರಮವಾಗಿದೆ. ಕಳೆದ ವರ್ಷದ ಅಧ್ಯಕ್ಷರಾದ ಉದಯ ಸ್ವಾದಿಯವರು ನಡೆಸಿಕೊಟ್ಟ ಧ್ವಜವಂದನೆ ಮತ್ತು ವಿಶ್ವಶಾಂತಿಗಾಗಿ ಒಂದು ನಿಮಿಷದ ಮೌನದಿಂದ ಕಾರ್ಯಕ್ರಮವು ಪ್ರಾರಂಭವಾಯಿತು.

ಕ್ಲಬ್ ಅಧ್ಯಕ್ಷರಾದ ತ್ರಿವಿಕ್ರಮ ಪಟವರ್ಧನರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಕ್ಲಬ್ಬಿನ ಮತ್ತು ಲಯನ್ಸ್ ಶಾಲೆಯ ಪರಿಚಯವನ್ನು ಮಾಡಿಕೊಟ್ಟು ಪ್ರಾಸ್ತಾವಿಕ ಮಾತುಗಳನ್ನು ಆಡಿ, ದೂರದ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮತ್ತು ಕಾಳುಮೆಣಸು ನಾಡಿನ ಮೂಡಿಗೆರೆಯಿಂದ ಬಂದ 25 ಜನರ ತಂಡಕ್ಕೆ ಶಿರಸಿಯ ಅಡಕೆ ತೋಟಗಳ ವೀಕ್ಷಣೆ, ಅಧ್ಯಯನ ಮತ್ತು ವಿಚಾರ ವಿನಿಮಯವೆಲ್ಲವೂ ಚೆನ್ನಾಗಿ ನಡೆಯಲಿ ಎಂದು ಹಾರೈಸಿದರು. ನಂತರ ಎರಡೂ ಕ್ಲಬ್ಬಿನ ಸದಸ್ಯರುಗಳು ತಮ್ಮ ತಮ್ಮ ಪರಿಚಯವನ್ನು ಮಾಡಿಕೊಂಡರು.

300x250 AD

ಶಿರಸಿ ಕ್ಲಬ್ಬಿನ ಕಾರ್ಯದರ್ಶಿ ರಮಾ ಪಟವರ್ಧನ್ ಮತ್ತು ಮೂಡಿಗೆರೆಯ ಕಾರ್ಯದರ್ಶಿ ಕೆ.ಟಿ.ದೇವಪ್ಪನವರು ತಮ್ಮ ತಮ್ಮ ಕ್ಲಬ್ಬಿನ ಚಟುವಟಿಕೆಗಳ ವರದಿಯನ್ನು ಸಲ್ಲಿಸಿದರು. ಮೂಡಿಗೆರೆ ಅಧ್ಯಕ್ಷರಾದ ಲಕ್ಷ್ಮಣ ಗೌಡರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಇಬ್ಬರು ಅಧ್ಯಕ್ಷರೂ ತಮ್ಮ ತಮ್ಮ ಜಿಲ್ಲೆಯ ಪಿನ್ನನ್ನು ಒಬ್ಬರಿಗೊಬ್ಬರು ವಿನಿಮಯಮಾಡಿಕೊಂಡರು. ನಮ್ಮ ಜಿಲ್ಲೆಯ ರೀಜನ್ ಛೆರ‍್ಪಸ್ಸನ್ ಜ್ಯೋತಿ ಭಟ್ ಶುಭಕೋರಿ ನಮ್ಮ ಜಿಲ್ಲೆಯ ಪರಿಚಯವನ್ನು ಮಾಡಿಕೊಟ್ಟರು. ಬಂದ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು. ಶಿರಸಿ ಕ್ಲಬ್ಬಿನ ಕೋಶಾಧ್ಯಕ್ಷರಾದ ರಾಜಲಕ್ಷ್ಮಿ ಹೆಗಡೆ, ಮೂಡಿಗೆರೆ ಕೋಶಾಧ್ಯಕ್ಷರಾದ ತಮ್ಮಣ್ಣ ಗೌಡರು ಮತ್ತು ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top