Slide
Slide
Slide
previous arrow
next arrow

ಕೂಜಳ್ಳಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನೆ

300x250 AD

ಕುಮಟಾ: ತಾಲೂಕಿನ ಕೂಜಳ್ಳಿಯಲ್ಲಿ ನೂತನವಾಗಿ ತೆರೆಯಲಾದ ಯಕ್ಷಗಾನ ತರಬೇತಿ ಕೇಂದ್ರವನ್ನು ಹಿರಿಯ ಯಕ್ಷಗಾನ ಕಲಾವಿದ ಮೋಹನ ನಾಯ್ಕ ಕೂಜಳ್ಳಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಉತ್ತರಕನ್ನಡ ಜಿಲ್ಲೆಯ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನವನ್ನು ಮುಂದಿನ ತಲೆ ಮಾರಿಗೆ ದಾಟಿಸುವ ಸದುದ್ದೇಶದಿಂದ ಈ ಯಕ್ಷಗಾನ ತರಬೇತಿ ಕೇಂದ್ರವನ್ನು ತೆರೆಯಲಾಗಿದೆ. ಈ ಕಾರ್ಯ ಮೊದಲೇ ಆಗಬೇಕಿತ್ತು ಎಂದ ಅವರು,ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕಾರವಾರ ಉಳಗಾ ಕಾಲೇಜ್ ಉಪನ್ಯಾಸಕ ಶೇಖರ ನಾಯ್ಕ ಮತ್ತು ವಕೀಲೆ ಮಮತಾ ನಾಯ್ಕ ಮಾತನಾಡಿ, ತರಬೇತಿ ಕೇಂದ್ರಕ್ಕೆ ಶುಭ ಹಾರೈಸಿದರು.
ಸಾಮಾಜಿಕ ಕಾರ್ಯಕರ್ತ ಮತ್ತು ಯಕ್ಷಗಾನ ಪ್ರೇಮಿ ಬಾಬು ನಾಯ್ಕ ಬಾಡ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಸುಪ್ತವಾದ ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾದರೆ, ಮಕ್ಕಳು ನಿಶ್ಚಿತ ಸಾಧನೆ ಮಾಡಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಭಾಗವತರಾದ ಜಿ ಎಲ್ ನಾಯ್ಕ, ಯಕ್ಷಗಾನ ಕಲಾವಿದರು, ಕಲಾ ಪ್ರೇಮಿಗಳು, ಊರ ಪ್ರಮುಖರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top