Slide
Slide
Slide
previous arrow
next arrow

ಗ್ರಾ.ಪಂ. ದೂರದೃಷ್ಟಿ ಯೋಜನೆ ತರಬೇತಿ ಕಾರ್ಯಕ್ರಮ ಯಶಸ್ವಿ

300x250 AD

ಯಲ್ಲಾಪುರ: ಜನಸ್ನೇಹಿ ಯೋಜನೆಗಳು ಅಭಿವೃದ್ಧಿಯ ಕಾರ್ಯಗತಕ್ಕೆ ನೆರವಾಗಬೇಕಾದರೆ ದೂರದೃಷ್ಟಿಯ ಯೋಜನೆಯ ಆಶಯಗಳು ಸಫಲವಾಗಬೇಕು. ಸ್ಥಳೀಯರ ವಿಶ್ವಾಸದೊಂದಿಗೆ ದೂರದೃಷ್ಟಿಯ  ಕಾರ್ಯ ಯೋಜನೆ ಜನಸಾಮಾನ್ಯರ ಸಮ್ಮುಖದಲ್ಲಿ  ಅನುಷ್ಠಾನಗೊಳಿಸುವುದು ಮಹತ್ವದ ಕೆಲಸವಾಗಿದೆ.  ಒಳ್ಳೆಯ ಕೆಲಸದಿಂದ ಮಾತ್ರ ಜನಪ್ರಿಯತೆಗೊಳಿಸಬಹುದು.ಸಮಾಜದ  ಗೌರವಕ್ಕೆ ಪಾತ್ರರಾಗಲು ಅವಕಾಶಗಳು ಒದಗಿಬರಬೇಕು. ಜನಪ್ರತಿನಿಧಿಗಳಿಗೆ ಆ ಕಾಲಘಟ್ಟದ ಆದರ ಸಿಗಬೇಕಾದರೆ ಸೇವೆಯಲ್ಲಿ ಸಾರ್ಥಕತೆ ಕಾಣಬೇಕಿದೆ. ಅದು ಮಹತ್ವದ ಮೈಲಿಗಲ್ಲು‌.  ನಮಗಿರುವ ಸಾಕಷ್ಟು ಅನುಭವದ ಸೇವೆಯಲ್ಲೂ ಮತ್ತೆ ಅರಿಯುವ ಅವಶ್ಯಕತೆ ಇರುತ್ತದೆ. ವರ್ತಮಾನದ ಬದಲಾವಣೆಗೆ ಸ್ಪಂದಿಸಲು ನಮ್ಮ ಗ್ರಾಮ ಮಾದರಿಯಾಗಲು ಈ ತರಬೇತಿ ಸಹಕಾರಿಯಾಗಲಿ ಎಂದು  ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ದಿ ಪಂಚಾಯತ  ರಾಜ್ ವಿಕೇಂದ್ರೀಕರಣ ವ್ಯವಸ್ಥೆಯ ಉಪಾಧ್ಯಕ್ಷರಾದ ಪ್ರಮೋದ  ಹೆಗಡೆ  ಅಭಿಪ್ರಾಯಪಟ್ಟರು.

ಯಲ್ಲಾಪುರ ಪಟ್ಟಣದ ಸಾಮರ್ಥ್ಯ  ಸೌಧದಲ್ಲಿ  ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಮತ್ತು  ಸಿಬ್ಬಂದಿಗಳ ಮೂರು ದಿನಗಳ  ಗ್ರಾಮ ಪಂಚಾಯತಿ ದೂರದೃಷ್ಟಿ ಯೋಜನೆಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ತರಬೇತಿ ಉದ್ಘಾಟನೆ ಕಾರ್ಯಕ್ರಮದಲ್ಲಿ  ಯಲ್ಲಾಪುರ ತಾಲ್ಲೂಕಾ ಚುನಾಯಿತ ಗ್ರಾಮ ಪಂಚಾಯತಿ ಪ್ರತಿನಿಧಿಗಳ ಒಕ್ಕೂಟದ  ಎಂ. ಕೆ. ಭಟ್ಟ, ಯಡಳ್ಳಿ   ತಾಲ್ಲೂಕಾ ಪಂಚಾಯತ ವ್ಯವಸ್ಥಾಪಕರಾದ ರಾಮದಾಸ ನಾಯ್ಕ, ಪರಶುರಾಮ ಹುಲಗೂರ, ಮಮತಾ ಗೌಡ ಉಪಸ್ಥಿತರಿದ್ದರು.

300x250 AD

ತರಬೇತಿಯ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಭಟ್ಟ ಆನಗೋಡ ಸ್ವಾಗತಿಸಿ ನಿರ್ವಹಿಸಿದರು. ಸುಗಮಗಾರ ದತ್ತಾತ್ರೇಯ ಭಟ್ಟ  ಕೊನೆಯಲ್ಲಿ ವಂದಿಸಿದರು

Share This
300x250 AD
300x250 AD
300x250 AD
Back to top