ಶಿರಸಿ: ನಗರದ ಪ್ರತಿಷ್ಠಿತ ತೋಟಗಾರ್ಸ್ ಕೋ.ಆಪರೇಟಿವ್ ಸೇಲ್ ಸೊಸೈಟಿ (ಟಿ.ಎಸ್.ಎಸ್.) ಸಂಸ್ಥೆಯಿಂದ ಉತ್ತರ ಕನ್ನಡ ಜಿಲ್ಲಾ ಪೊಲೀಸರಿಗೆ ಮಹಿಂದ್ರಾ ಬೊಲೆರೋ ವಾಹನವನ್ನು ನೀಡಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷರಾದ ರಾಮಕೃಷ್ಣ ಹೆಗಡೆ ಕಡವೆ ಇವರು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಇವರಿಗೆ ವಾಹನವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸದಸ್ಯರು,ಶಿರಸಿ ಉಪವಿಭಾಗದ ಡಿ.ವೈ,ಎಸ್,ಪಿ.ರವಿ ನಾಯ್ಕ್,ಸಿಪಿಐ ರಾಮಚಂದ್ರ ನಾಯಕ್ ಹಾಗು ಇನ್ನಿತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ಇಲಾಖೆಗೆ ಟಿ.ಎಸ್.ಎಸ್.ನಿಂದ ಬೊಲೆರೋ ವಾಹನ ಕೊಡುಗೆ
