• Slide
    Slide
    Slide
    previous arrow
    next arrow
  • ಪ್ರತಿಭಾಪುರಸ್ಕರಾರಕ್ಕೆ ಅರ್ಜಿ ಆಹ್ವಾನ

    300x250 AD

    ಶಿರಸಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ. (ರಿ.) ಶಿರಸಿ ಉತ್ತರಕನ್ನಡ ಇದರ 2021-22 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಪ್ರತಿ ವರ್ಷದಂತೆ ನಡೆಯಲಿದ್ದು ಕಾರ್ಯಕ್ರಮವನ್ನು ನವೆಂಬರ್ 2022 ರ ಮಾಹೆಯಲ್ಲಿ ನಡೆಸಲು ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅದರಂತೆ ಶಿರಸಿ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರಿ ನೌಕರರ ಮಕ್ಕಳ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚಿನ ಹಾಗೂ ಪಿ.ಯು.ಸಿ. ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ 90% ಕ್ಕಿಂತ ಹೆಚ್ಚಿನ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಪುರಸ್ಕರಿಸಲಾಗುವುದು. ಅರ್ಹರು ತಮ್ಮ ಅರ್ಜಿಯೊಂದಿಗೆ ದೃಢೀಕೃತ ಅಂಕಪಟ್ಟಿ, ಮೊಬೈಲ್ ಸಂಖ್ಯೆ ಹಾಗೂ ಇತ್ತೀಚಿನ ಪಾಸ್‌ಪೊರ್ಟ ಅಳತೆಯ ಭಾವಚಿತ್ರವನ್ನು ಅ.20ರ ಒಳಗೆ ಸಂಘದ ತಮ್ಮ ಇಲಾಖೆಯ ಪ್ರತಿನಿಧಿಗಳಿಗೆ ಸಲ್ಲಿಸಲು ಕೋರಿದೆ. ಕಾರ್ಯಕ್ರಮದ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

    ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರನ್ನು ಸಂಪರ್ಕಿಸಿ :
    1) ಶ್ರೀ ನಾರಾಯಣ ಜೆ. ನಾಯ್ಕ ಅಧ್ಯಕ್ಷರು, ಕ.ರಾ.ಸ.ನೌಕರರ ಸಂಘ ಶಿರಸಿ. ಮೊ.ನಂ. : 9448609631
    2) ಶ್ರೀ ವಿ.ವಿ. ಭಟ್ಟ, ಕಾರ್ಯದರ್ಶಿಗಳು, ಕ.ರಾ.ಸ.ನೌಕರರ ಸಂಘ ಶಿರಸಿ. ಮೊ.ನಂ. : 9448720079

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top