Slide
Slide
Slide
previous arrow
next arrow

ದಿ.ಜಿ.ಎಸ್.ಹೆಗಡೆ ಅಜ್ಜೀಬಳ ಸಹಕಾರ ಪ್ರಶಸ್ತಿಗೆ ಹೆಸರು ಪ್ರಕಟ: ಸೆ.24ಕ್ಕೆ ಪ್ರಶಸ್ತಿ ಪ್ರದಾನ

300x250 AD

ಶಿರಸಿ: ದಿ. ಜಿ.ಎಸ್.ಹೆಗಡೆ, ಅಜ್ಜೀಬಳರವರ ಸ್ಮರಣಾರ್ಥ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಓರ್ವ ಸಹಕಾರಿಗೆ ಹಾಗೂ ಓರ್ವ ಸಹಕಾರಿ ನೌಕರರಿಗೆ ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿ., ಪ್ರಧಾನ ಕಛೇರಿ, ಶಿರಸಿಯಿಂದ ಪ್ರತಿವರ್ಷ ಪ್ರಶಸ್ತಿ ನೀಡಲಾಗುತ್ತಿದ್ದು, ಅದರಂತೆ 2020-21ನೇ ಸಾಲಿನ, ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಮಾಡಿದ ಸೀತಾರಾಮ ರಾಮಚಂದ್ರ ಭಟ್ಟ ಇಟಗಿ ಹಾಗೂ ಸಹಕಾರಿ ನೌಕರರಾಗಿ ಉತ್ತಮ ಸೇವೆ ಸಲ್ಲಿಸಿದ ಹೊನ್ನಾವರ ತಾಲೂಕಿನ ಗುಣವಂತೆಯ ಗಣಪತಿ ಈಶ್ವರ ಹೆಗಡೆ ಇವರಿಗೆ ದಿ. ಜಿ. ಎಸ್. ಹೆಗಡೆ, ಅಜ್ಜೀಬಳ ಸಹಕಾರ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲು ನಿರ್ಣಯಿಸಲಾಗಿದೆ.
ಸಿದ್ದಾಪುರ ತಾಲೂಕಿನ ಇಟಗಿಯ ಸೀತಾರಾಮ ರಾಮಚಂದ್ರ ಭಟ್ ಇವರು ಇಟಗಿ ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಇಟಗಿ, ಇದರಲ್ಲಿ 22 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಹಾಗೂ 10 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಅಲ್ಲದೇ ಗ್ರಾಮ ಪಂಚಾಯತ ಅಧ್ಯಕ್ಷರಾಗಿಯೂ, ಟಿ.ಎ.ಪಿ.ಸಿ.ಎಂ.ಎಸ್. ಸಿದ್ದಾಪುರ ಇದರಲ್ಲಿ 21 ವರ್ಷಗಳ ಅವಧಿಗೆ ನಿರ್ದೇಶಕರಾಗಿಯೂ ಹಾಗೂ 10 ವರ್ಷಗಳ ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಇದರಲ್ಲಿ 6 ವರ್ಷಗಳ ಅವಧಿಗೆ ನಿರ್ದೇಶಕರಾಗಿ ಹಾಗೂ ಅಡಿಕೆ ಮಾರಾಟ ಮಹಾಮಂಡಳ, ಶಿವಮೊಗ್ಗ ಇದರಲ್ಲಿಯೂ 6 ವರ್ಷಗಳ ಅವಧಿಗೆ ನಿರ್ದೇಶಕರಾಗಿದ್ದರು. ಸದರಿಯವರು ಕೆಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಹಕಾರಿ ರಂಗವಲ್ಲದೇ ಶಿಕ್ಷಣ ರಂಗ, ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿಯೂ ಅವರು ಕೊಡುಗೆಯನ್ನು ನೀಡಿದ್ದು,ಲಂಬಾಪುರದಲ್ಲಿದ್ದ ಸಂಸ್ಕೃತ ಪಾಠಶಾಲೆಯನ್ನು ಇಟಗಿಗೆ ಸ್ಥಳಾಂತರಿಸಿ, 25 ವರ್ಷಗಳವರೆಗೆ ಪಾಠಶಾಲೆಯ ಅಧ್ಯಕ್ಷರಾಗಿದ್ದರು. ಇಟಗಿ ಆರ್. ವಿ. ಹೈಸ್ಕೂಲ್ ಸಮಿತಿಯ ಸದಸ್ಯರಾಗಿ ಪ್ರೌಢಶಾಲೆಯ ಉನ್ನತಿಗಾಗಿ ಶ್ರಮಿಸಿರುತ್ತಾರೆ. ಆದ್ದರಿಂದ 2020-21ನೇ ಸಾಲಿನ ಬಗ್ಗೆ ಜಿಲ್ಲೆಯ ಉತ್ತಮ ಸಹಕಾರಿಗೆ ನೀಡುವ ‘ದಿ|| ಜಿ.ಎಸ್. ಹೆಗಡೆ, ಅಜ್ಜೀಬಳ ಸಹಕಾರ ಪ್ರಶಸ್ತಿ’ಗೆ ಆಯ್ಕೆ ಮಾಡಿ ರೂ.15,000/- ನಗದು ಬಹುಮಾನ ಸಹಿತ ಪ್ರಶಸ್ತಿ ನೀಡಿ ಸನ್ಮಾನಿಸಲು ನಿರ್ಣಯಿಸಲಾಗಿದೆ.

ಗಣಪತಿ ಈಶ್ವರ ಹೆಗಡೆ ಇವರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ., ಕೆಳಗಿನೂರು, ಹೊನ್ನಾವರ ಇದರಲ್ಲಿ ಸಹಾಯಕರಾಗಿ, ಮುಖ್ಯಕಾರ್ಯನಿರ್ವಾಹಕರಾಗಿ 39 ವರ್ಷಗಳ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ಸೇವಾ ಅವಧಿಯಲ್ಲಿ ಸಂಘಕ್ಕೆ ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿ., ಬೆಂಗಳೂರು ಇವರಿಂದ 2003 ರಿಂದ ಸತತವಾಗಿ ಪ್ರತಿ ವರ್ಷ ‘ಉತ್ತಮ ಸಹಕಾರಿ ಸಂಘ’ ಪ್ರಶಸ್ತಿ ಲಭಿಸಿರುತ್ತದೆ. ಕೆಡಿಸಿಸಿ ಬ್ಯಾಂಕಿನಿಂದಲೂ ತಾಲೂಕಾ ಮಟ್ಟದ ಉತ್ತಮ ಸಹಕಾರಿ ಸಂಘ ಬಹುಮಾನ ಬಂದಿದೆ.
ನಿವೃತ್ತಿ ನಂತರವೂ ಸಾಮರಸ್ಯ ಪತ್ತಿನ ಸಹಕಾರ ಸಂಘ ಹೊನ್ನಾವರ ಇದರಲ್ಲಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಿ, ನಂತರ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಚಿತ್ತಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಸ್ಥಾಪನೆಯ ಕೆಲಸವನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಕೊಡುವುದರ ಮೂಲಕ ಸಹಕಾರ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡುವುದರೊಂದಿಗೆ ಗುಣವಂತೆ ಸ್ವರ ಸಂಸ್ಕಾರ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಾಧನೆ ಪರಿಗಣಿಸಿ 2020-21ನೇ ಸಾಲಿನ ಬಗ್ಗೆ ಜಿಲ್ಲೆಯ ಉತ್ತಮ ಸಹಕಾರಿ ನೌಕರರಿಗೆ ನೀಡುವ ‘ದಿ|| ಜಿ.ಎಸ್. ಹೆಗಡೆ, ಅಜ್ಜೀಬಳ ಸಹಕಾರ ಪ್ರಶಸ್ತಿ’ಗೆ ಆಯ್ಕೆ ಮಾಡಿ ರೂ.15,000/- ನಗದು ಬಹುಮಾನ ಸಹಿತ ಪ್ರಶಸ್ತಿ ನೀಡಿ, ಸನ್ಮಾನಿಸಲು ನಿರ್ಣಯಿಸಲಾಗಿದೆ.

300x250 AD

ಇಬ್ಬರು ಸಾಧಕರಿಗೆ ಸೆ.24 ರಂದುಕೆಡಿಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯ ಸಭಾಭವನದಲ್ಲಿ ಜರುಗುವ ವಾರ್ಷಿಕ ಮಹಾಸಭೆಯಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top