• Slide
  Slide
  Slide
  previous arrow
  next arrow
 • ಹಾಲ್ಟಿoಗ್ ಬಸ್ ಪುನರಾರಂಭಿಸುವಂತೆ ಸಾರ್ವಜನಿಕರ ಪ್ರತಿಭಟನೆ

  300x250 AD

  ಹೆಗ್ಗರಣಿ: ಸಿದ್ಧಾಪುರದಿಂದ ಹೆಗ್ಗರಣಿ ಮಾರ್ಗವಾಗಿ ಅಮ್ಮಿನಲ್ಲಿ ಹಾಲ್ಟಿoಗ್ ಬಸ್ ಪುನರಾರಂಭಿಸುವಂತೆ ಬಸ್ ತಡೆದು ಪ್ರತಿಭಟನೆಯನ್ನು ನಡೆಸಲಾಯಿತು. ಹೆಗ್ಗರಣಿ, ನಿಲ್ಕುಂದ,ತಂಡಾಗುಂಡಿ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಗೆ,ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಿದ್ದಾಪುರಕ್ಕೆ ಹೋಗಿ ಬರಲು ಬೆಳಿಗ್ಗೆ ಹಾಗೂ ಸಂಜೆ ಯಾವುದೇ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಹಾಲ್ಟಿoಗ್ ಬಸ್ ಪುನರಾರಂಭಿಸಲು ಮನವಿ ನೀಡಿ ಪ್ರತಿಭಟನೆ ನಡೆಸಲಾಯಿತು.
  ಶಾಂತಿಯುತವಾಗಿ ನಡೆದ ಪ್ರತಿಭಟನೆಗೆ ವಾಯುವ್ಯ ಕರ್ನಾಟಕ ಸಾರಿಗೆ ಅಧಿಕಾರಿಗಳು ಭೇಟಿ ನೀಡಿ ಸ್ಪಂದಿಸಿದರು ಹಾಗೂ ಲಿಖಿತವಾಗಿ ಆಶ್ವಾಸನೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು. ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರು ಸರೋಜ ರಾವ್ ,ಸದಸ್ಯರಾದ ನವೀನ್ ಹೆಗಡೆ, ಮಂಜುನಾಥ್ ಮಡಿವಾಳ, ಮಧುರಾ ಭಟ್, ಅನ್ನಪೂರ್ಣ ಹರಿಜನ ,ಪಾರ್ವತಿ ಚೆನ್ನಯ್ಯ, ಸವಿತಾ ಗೌಡ , ಅಬ್ಧುಲ್ ಭಾರಿ ಸಾಬ್ ಹಾಗೂ ರಾಘವೇಂದ್ರ ರಾಯ್ಕರ್ ಮತ್ತು ಎಲ್ಲ ಸಾರ್ವಜನಿಕರು ಪಾಲ್ಗೊಂಡಿದ್ದು ಆರಕ್ಷಕದಳದವರು ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top