Slide
Slide
Slide
previous arrow
next arrow

ನ್ಯಾಸರ್ಗಿಯಲ್ಲಿ ಚಿತ್ರಕಲೆ,ರಂಗೋಲಿ ಸ್ಪರ್ಧೆ

300x250 AD

ಮುಂಡಗೋಡ: ಗಣೇಶ ಹಬ್ಬದ ಪ್ರಯುಕ್ತ ಗಜಾನನ ಯುವಕ ಮಂಡಳಿ ನ್ಯಾಸರ್ಗಿ ಗ್ರಾಮದ ಪ್ಲಾಟ್‌ನಲ್ಲಿ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ಏರ್ಪಡಿಸಿತ್ತು.
ಹೆಣ್ಣು ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಜ್ಯೋತಿ ತಳವಾರ, ದ್ವಿತೀಯ ಸ್ಥಾನವನ್ನು ವನಿತಾ ಭೋವಿ ಹಾಗೂ ತೃತೀಯ ಸ್ಥಾನವನ್ನು ಕಾಳಮ್ಮ ಭೋವಿ ವಿಜೇತರಾಗಿ ಪಡೆದುಕೊಂಡರು.
ಗಂಡುಮಕ್ಕಳಿಗಾಗಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪ್ರಕಾಶ ಭೋವಿ, ದ್ವಿತೀಯ ಸ್ಥಾನವನ್ನು ಅಭಿಷೇಕ ಪೂಜಾರಿ ಹಾಗೂ ತೃತೀಯ ಸ್ಥಾನವನ್ನು ವಿಠಲ್ ತೀತೆ ಪಡೆದುಕೊಂಡಿದ್ದಾರೆ. ಒಟ್ಟಾರೆ ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ 25 ಮಂದಿ ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top