• Slide
  Slide
  Slide
  previous arrow
  next arrow
 • ವಿಶ್ವದರ್ಶನ ವಿದ್ಯಾರ್ಥಿಗಳಿಂದ ಶಿಕ್ಷಕರ ದಿನ ಆಚರಣೆ

  300x250 AD

  ಯಲ್ಲಾಪುರ:  ಪಟ್ಟಣದ ವಿಶ್ವದರ್ಶನ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಶಿಕ್ಷಕರ ದಿನ ಆಚರಿಸಿದರು. 

  ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಕಾಲೇಜಿನ ಎಲ್ಲ ವಿದ್ಯಾರ್ಥಿ ಸಮೂಹ ಸೇರಿ ಆಯೋಜಿಸಿದ್ದ ಸಮಾರಂಭವನ್ನು ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ ಉದ್ಘಾಟಿಸಿ,  ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ವಿದ್ಯಾರ್ಥಿಗಳೇ, ನಮಗೆ ನಾವೇ ಗುರುವಾಗುವುದು ಮನುಷ್ಯನ ಗುರಿಯಾಗಬೇಕು ಎಂದರು. 

   ಪ್ರಾಂಶುಪಾಲ ಡಾ.ದತ್ತಾತ್ರೇಯ ಗಾಂವ್ಕರ್ ಮಾತನಾಡಿದರು. ಶಿಕ್ಷಕರಿಗಾಗಿ ವಿದ್ಯಾರ್ಥಿಗಳು ಹಮ್ಮಿಕೊಂಡ ವಿವಿಧ ವಿನೋದ ಪರ ಆಟಗಳು  ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ  ಕವನ ವಾಚನ, ಗಾಯನ , ನೃತ್ಯ ಮುಂತಾದ ಕಾರ್ಯಕ್ರಮಗಳು ನಡೆದವು.

  300x250 AD

   ವಿದ್ಯಾರ್ಥಿ ಪ್ರತಿನಿಧಿಗಳಾದ ಆರ್.ಭರತ, ಪ್ರಥ್ವಿ ಗಾಂವ್ಕರ್ , ಅಬ್ದುಲ್ ಶೇಖ್, ಅಕ್ಷಯ್ ಭಟ್ಟ ಅವರು ಉಪನ್ಯಾಸಕಿ ರಂಜಿತಾ ನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಂಯೋಜಿಸಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top