Slide
Slide
Slide
previous arrow
next arrow

ಬೈಕ್’ಗೆ ಹಿಂದಿನಿಂದ ಗುದ್ದಿದ ಕಾರು:ಓರ್ವ ಸವಾರನ ದುರ್ಮರಣ

300x250 AD

ಅಂಕೋಲಾ: ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಹಿಂಬದಿ ಸವಾರ ಮೃತಪಟ್ಟ ಘಟನೆ ರಾ.ಹೆ 66 ರ ತಾಲೂಕಿನ ಅವರ್ಸಾ – ಹಾರವಾಡ ಗಡಿಭಾಗದ ಡಾಂಬರ್ ಪ್ಲಾಂಟ್ ಕ್ರಾಸ್ ಬಳಿ ಸಂಭವಿಸಿದೆ.
ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಗಾಬಿತ ಕೇಣಿ ನಿವಾಸಿ ಸಚಿನ್ ಕೃಷ್ಣ ಕುರ್ಲೆ ಮೃತ ದುರ್ದೈವಿಯಾಗಿದ್ದು, ಈತನು ತನ್ನ ತಂದೆ ಕೃಷ್ಣ ಕುರ್ಲೆಯ ಜೊತೆ ಕಾರವಾರದಿಂದ ಅಂಕೋಲಾ ಕಡೆ ಬರುವಾಗ, ಮಾರ್ಗ ಮಧ್ಯೆ ಡಾಂಬರ್ ಪ್ಲಾಂಟ್ ಕ್ರಾಸ್ ಬಳಿ ಜೋರಾಗಿ ಬಂದ ಕಾರೊಂದು ಅಪಘಾತ ಪಡಿಸಿದೆ. ಅಪಘಾತದ ರಭಸಕ್ಕೆ ಬೈಕ್ ಸಿಡಿದು ಬಿದ್ದಿದ್ದು, ಕಾರ್ ಪಲ್ಟಿಯಾಗಿ ರಸ್ತೆಯಂಚಿನ ಕಂದಕಕ್ಕೆ ಬಿದ್ದಿದೆ.

300x250 AD
Share This
300x250 AD
300x250 AD
300x250 AD
Back to top