ಯಲ್ಲಾಪುರ: ಮೋಸದ ಮೂಲಕ ಮಕ್ಕಳು,ಮಹಿಳೆಯರ ಕಳ್ಳಸಾಗಾಣಿಕೆ ನಡೆಯುತ್ತಿದ್ದು,ಈ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಹೇಳಿದರು.
ಅವರು ಶನಿವಾರ ಪಟ್ಟಣದ ಸರಕಾರಿ ಪ.ಪೂ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಹಾಗೂ ವಕಿಲರ ಸಂಘ,ಪೋಲಿಸ್ ಇಲಾಖೆ, ಸಿಡಿಪಿಓ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ,ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಳ್ಳಸಾಗಣೆಯನ್ನು ತಡೆಯುವ ನಿಟ್ಟಿನಲ್ಲಿ ಕಾನೂನಾತ್ಮಕವಾಗಿ ಪ್ರಯತ್ನದ ಅವಶ್ಯಕತೆಯಿದೆ ಎಂದರು.
ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀಬಾಯಿ ಬಸನಗೌಡ ಪಾಟೀಲ್ ಮಾತನಾಡಿ,”ಕಾನೂನು ಬಾಹೀರ ಚಟುವಟಿಕೆಗಳನ್ನು ಎಸಗುವುವರ ಸುಳಿವು ದೋರೆತಲ್ಲಿ ಪೊಲೀಸ್ ಠಾಣೆಗೆ ತಿಳಿಸಬೇಕು” ಎಂದರು.
ನ್ಯಾಯವಾದಿ ಎನ್.ಟಿ.ಗಾಂವ್ಕಾರ ಮಾನವ ಕಳ್ಳ ಸಾಗಾಣಿಕೆ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ಟ,ಪ್ಯಾನಲ್ ವಕೀಲೆ ಬೇಬಿ ಅಮೀನಾ ಶೇಖ್,ಸಿಪಿಐ ಸುರೇಶ ಯಳ್ಳೂರು, ಪಿಎಸೈ ಅಮೀನ್ ಸಾಬ್ ಅತ್ತಾರ್,ಸಿಡಿಪಿಓ ರಫಿಕಾ ಹಳ್ಳೂರು,ಉಪಸ್ಥಿತರಿದ್ದರು.ಕಾಲೇಜಿನ ಪ್ರಾಚಾರ್ಯ ಸುಬ್ರಾಯ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬೊಮ್ಮಯ್ಯ ನಾಯ್ಕ ಸ್ವಾಗತಿಸಿದರು.ಪ್ಯಾರಾಲೀಗಲ್ ವಾಲಂಟೀಯರ್ ಸಂಜೀವಕುಮಾರ್ ಹೊಸ್ಕೇರಿ ಪ್ರತಿಜ್ಞಾವಿಧಿ ಬೋಧಿಸಿದರು.