ಶಿರಸಿ: ನರೇಬೈಲನ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು.28ರಂದು ರೋಟರಿ ಇಂಟ್ರಾಕ್ಟ ಕ್ಲಬ್‌ನ ಪುನರ್‌ರಚನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಶಿರಸಿ ರೋಟರಿಯ ಅಧ್ಯಕ್ಷ ರೋ.ಗಣೇಶ ಹೆಗಡೆ ,ಕಾರ್ಯದರ್ಶಿ ರೋ ಎಸ್.ಪಿ.ದೇಶಪಾಂಡೆ , ಇನ್ಸ್ಟಾಲಿಂಗ್ ಆಫಿಸರ್ ರೋ. ಅರುಣ ನಾಯ್ಕ ,ಮಿಯಾರ್ಡ್ಸ ಕಾರ್ಯದರ್ಶಿ ಎಲ್ ಎಂ ಹೆಗಡೆ , ಶಿರಸಿ ಇನ್ನರವೀಲ್ ಕಾರ್ಯದರ್ಶಿ ಹಾಗೂ ಶಾಲಾ ಆಡಳಿತಾಧಿಕಾರಿಣಿ ವಿದ್ಯಾ ನಾಯ್ಕ, ರೋಟರಿ ಪದಾಧಿಕಾರಿಗಳು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರೋಟರಿ ಕ್ಲಬ್ ಶಿರಸಿಯ ಅಧ್ಯಕ್ಷರಾದ ಗಣೇಶ ಹೆಗಡೆ ಮಾತನಾಡುತ್ತಾ ರೋಟರಿಯು ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಮಾಜಕ್ಕೆ ಯಾವ ರೀತಿಯ ಸೇವೆ ಸಲ್ಲಿಸುತ್ತದೆ ಎಂಬುದನ್ನು ವಿವರವಾಗಿ ತಿಳಿಸಿದರು. ರೋ ಅರುಣ ನಾಯ್ಕ ಚಂದನ ಇಂಟರಾಕ್ಟ ಕ್ಲಬ್ ಇನಸ್ಟಾಲಿಂಗ್ ಆಫಿಸರ್ ಆಗಿ ಆಗಮಿಸಿ ಚಂದನ ಇಂಟ್ರಾಕ್ಟ್ ಕ್ಲಬ್‌ನ ಸದಸ್ಯರಿಗೆ ಸೇವಾ ದೀಕ್ಷೆ ಹಾಗೂ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮಕ್ಕಳಿಗೆ ರೋಟರಿ ಕ್ಲಬ್ ಸ್ಥಾಪನೆ ,ಇತಿಹಾಸ ಎಲ್ಲದರ ಬಗ್ಗೆ ತಿಳಿಸಿದರು .ವಿದ್ಯಾರ್ಥಿಗಳಿಗೆ ಆಟವಾಡಿಸುವದರ ಮೂಲಕ ನಾಯಕತ್ವ ಗುಣ ಹೇಗಿರಬೇಕು ಎಂಬುದನ್ನು ತಿಳಿಸಿದರು ಹಾಗೂ ಕೇಳಿಸಿಕೊಳ್ಳುವಾಗ ಪೂರ್ತಿ ಲಕ್ಷ್ಯದೊಂದಿಗೆ ಕೇಳಬೇಕು ಎಂಬುದನ್ನು ಚಟುವಟಿಕೆಯ ಮೂಲಕ ತಿಳಿಸಿದರು. ಚಂದನ ಶಾಲೆಯ ವಿದ್ಯಾರ್ಥಿಗಳಾದ ಶ್ರೇಯಸ್ ಹೆಗಡೆ ಚಂದನ ಇಂಟ್ರಾಕ್ಟ ಕ್ಲಬ್‌ನ ಅಧ್ಯಕ್ಷರಾಗಿ, ಆದರ್ಶ ಭಟ್ ಉಪಾಧ್ಯಕ್ಷರಾಗಿ, ಆದರ್ಶ ಹೆಗಡೆ ಕಾರ್ಯದರ್ಶಿಯಾಗಿ ,ಅಲೋಕ ಹೆಗಡೆ ಉಪ-ಕಾರ್ಯದರ್ಶಿಯಾಗಿ ಹಾಗೂ ಹರ್ಷ ಪಟಗಾರ ಖಜಾಂಜಿಯಾಗಿ ನೇಮಕಗೊಂಡರು.
ಕಾರ್ಯಕ್ರಮದಲ್ಲಿ ಶಿರಸಿ ರೋಟರಿಯ ಪಧಾದಿಕಾರಿಗಳು, , ಇಂಟ್ರಾಕ್ಟ ಕ್ಲಬ್ ಶಾಲಾ ಸಂಯೋಜಕರಾದ ಶಿಕ್ಷಕ ಸಿಂಧೂರ್ ಭಟ್ ತದ್ದಲಸೆ, ಮುಖ್ಯೋಪಾಧ್ಯಾಯರು,ಶಿಕ್ಷಕರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮೃತಾ ನಾಯ್ಕ ಸ್ವಾಗತಿಸಿದರು. ರೋ ಎಸ್ ಪಿ ದೇಶಪಾಂಡೆ ವಂದಿಸಿದರು. ಸಂಪ್ರೀತಾ ನಿರ್ವಹಿಸಿದರು .ಚಂದನ ಇಂಟ್ರಾಕ್ಟ್ ಕ್ಲಬ್‌ನ ಸದಸ್ಯರಿಂದ ಶಿರಸಿ ರೋಟರಿಯ ಸಹಯೋಗದೊಂದಿಗೆ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.