ಕಾರವಾರ: ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ತಾಲೂಕಿನ ಕದ್ರಾ ಜಲಾಶಯದಿಂದ ಶುಕ್ರವಾರ 40331 ಕ್ಯುಸೆಕ್ಸ್ ನೀರು ಹೊರಬಿಟ್ಟಿದ್ದು, ನದಿ ಪಾತ್ರದ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ.
ಕಾಳಿ ನದಿ ಪಾತ್ರದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ಜಲಾಶಯಗಳಲ್ಲಿ ಓಳ ಹರಿವಿನ ಪ್ರಮಾಣ ಸಹ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮುಂಜಾಗ್ರತಾ ಕ್ರಮವಾಗಿ ಎಂಟು ಗೇಟ್ ಗಳ ಮೂಲಕ 40331 ಕ್ಯುಸೆಕ್ಸ್ ನೀರನ್ನ ಹೊರಬಿಡಲಾಗಿದೆ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಡಸಳ್ಳಿ, ಹಾಗೂ ಬೊಮ್ಮನಳ್ಳಿ ಜಲಾಶಯದಲ್ಲಿ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು ಬೊಮ್ಮನಳ್ಳಿ ಜಲಾಶಯ ಭರ್ತಿ ಹಂತಕ್ಕೆ ಬಂದಿದ್ದು ನೀರನ್ನು ಹೊರಬಿಡಲಾಗಿತ್ತು. ಈ ನಿಟ್ಟಿನಲ್ಲಿ ಕದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗಿದ್ದು34.50 ಮೀ ಗರಿಷ್ಟ ಮಟ್ಟ ಇರುವ ಜಲಾಶಯದಲ್ಲಿ ಈಗಾಗಲೇ 34.50 ನಷ್ಟು ನೀರು ಸಂಗ್ರಹವಾಗಿದ್ರು ಜಲಾಶಯದ ಹಿತದೃಷ್ಟಿಯಿಂದ ನೀರನ್ನ ಶುಕ್ರವಾರ ಹೊರಬಿಡಲಾಗಿದೆ.
ಇನ್ನು ಜಲಾಶಯದಿಂದ 40 ಸಾವಿರ ಕ್ಯುಸೆಕ್ಸ್ ನೀರು ಹೊರಬಿಟ್ಟಿರುವುದು ನದಿ ಪಾತ್ರದ ಭೈರಾ, ಕದ್ರಾ, ಗೋಟೆಗಾಳಿ, ಕೆರವಡಿ, ಸಿದ್ದರ, ಕಿನ್ನರ, ಕುರ್ನಿಪೇಟೆ ಸೇರಿದಂತೆ ಹಲವು ಗ್ರಾಮದಲ್ಲೊ ಆತಂಕ ಎದುರಾಗಿದ್ದು ನೀರು ನಿರಂತರವಾಗಿ ಇದೇ ಪ್ರಮಾಣದಲ್ಲಿ ಬಿಟ್ಟರೇ ಮತ್ತೆ ನೆರೆ ಸೃಷ್ಟಿಯಾಗಬಹುದು ಎಂದು ಆತಂಕದಲ್ಲಿಯೇ ಜನರು ಕಾಲ ಕಳೆಯುವಂತಾಗಿದೆ.