ಯಲ್ಲಾಪುರ: ಈಗಿನ ಶತಮಾನ ಯೋಗ್ಯತೆ ಮತ್ತು ಸ್ಪರ್ಧಾತ್ಮಕ ಶತಮಾನವಾಗಿದೆ. ಪ್ರತಿ ಕ್ಷೇತ್ರದಲ್ಲಿಯು ತನ್ನ ಸ್ವಂತಿಕೆಯ ಕೌಶಲ್ಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಉದ್ಯೋಗ ಗಳಿಸಲು ಸಾಧ್ಯ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಪಟ್ಟಣದ ಎಪಿಎಮ್‌ಸಿ ರೈತ ಸಭಾಭವನದಲ್ಲಿ ಶುಕ್ರವಾರ ಗ್ರಾಮ ವಿಕಾಸ ಸೊಸೈಟಿ ವತಿಯಿಂದ ಆಯೋಜಿಸಿದ್ದ ಉದ್ಯೋಗಾಧಾರಿತ ಉಚಿತ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಮಕ್ಕಳಲ್ಲಿ ಆತ್ಮಸ್ಥೈರ್ಯವಿದೆ ಅದರ ಆಧಾರದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾದ್ಯವಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ನಿರುದ್ಯೋಗ ನಿವಾರಣೆಗೆ ಕಟಿಬದ್ದವಾಗಿದೆ. ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲವು ದೇಶದ ಬಹುದೊಡ್ಡ ಆಸ್ತಿ. ಯುವ ಜನರಿಗೆ ಶಿಕ್ಷಣದ ಜೊತೆಗೆ ಕೌಶಲ್ಯವೂ ಇದ್ದರೆ ಭವಿಷ್ಯದ ಸವಾಲು ಎದುರಿಸಲು ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೌಶಲ್ಯಾಭಿವೃದ್ಧಿಗೆ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಜಾರಿ ಮಾಡುತ್ತಾ ಬರುತ್ತಿವೆ. ಗ್ರಾಮೀಣ ವಿಕಾಸ ಸಂಸ್ಥೆ ಬೆಂಗಳೂರಿನಿAದ ಆಗಮಿಸಿ ನನ್ನ ಕ್ಷೇತ್ರದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್.ಗಾಂವ್ಕರ್, ಮಂಡಲ ಉಪಾಧ್ಯಕ್ಷ ಶಿರಿಷ್ ಪ್ರಭು, ಖಜಾಂಚಿ ಮುರಳಿ ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸದಸ್ಯರಾದ ಸತೀಶ ನಾಯ್ಕ, ಅಮಿತ್ ಅಂಗಡಿ, ಪ್ರಶಾಂತ ತಳವಾರ, ರಾಜು ನಾಯ್ಕ, ಆತ್ಮಾ ಕಮಿಟಿ ಅಧ್ಯಕ್ಷರಾದ ಗಣೇಶ ಹೆಗಡೆ ಪಣತಗೇರಿ, ಗ್ರಾಮೀಣ ವಿಕಾಸ ಸೊಸೈಟಿ ಪ್ರಮುಖರಾದ ಶ್ರೇಯಾಂಸಕುಮಾರ್ ಜೈನ್, ಗಿರೀಶ್ ಮತ್ತಿಕೊಪ್ಪ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.