ಯಲ್ಲಾಪುರ: ತಾಲೂಕಿನ ಸ್ನೇಹ ಸಾಗರ ವಸತಿ ಶಾಲೆಯಲ್ಲಿ 75 ರ ಸ್ವಾತಂತ್ರ್ಯ ಅಮೃತ ಮಹೊತ್ಸವದ ಆಚರಣೆಯ ಅಂಗವಾಗಿ ಶಾಲಾ ಸುತ್ತ-ಮುತ್ತ 75 ಗಿಡಗಳನ್ನು ನೆಡುವ ಮೂಲಕ 2022 ರ ಆಜಾದಿ ಕಾ ಅಮೃತ ಮಹೋತ್ಸವ ಜರುಗಿತು.
ಸಭಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದ ಡಿ.ಸಿ.ಪ್ ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಜಿ. ಹೆಗಡೆ, ಎ.ಸಿ.ಎಪ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್, ಪರಿಸರ ಪ್ರೇಮಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿವಾನಂದ ಕಳವೆ, ವಲಯ ಅರಣ್ಯ ರಕ್ಷಣಾಧಿಕಾರಿ ಪ್ರಸಾದ್ ಪಡ್ನೇಕರ್ ಹಾಗೂ ಶಾಲಾ ಅಧ್ಯಕ್ಷ ಎಸ್. ಎಲ್ ಭಟ್, ನಿರ್ದೇಶಕ ವಿನಾಯಕ ಹೆಬ್ಬಾರ್ ಗಿಡಕ್ಕೆ ನೀರುಣಿಸುವ ಮುಖೇನ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಎಸ್.ಜಿ. ಹೆಗಡೆ,ಅವರು ಮಾತನಾಡಿ ಸೃಷ್ಟಿಯಲ್ಲಿ ಪರಿಸರವು ವಿಶಿಷ್ಟ ಅದ್ಭುತವಾದ ಚೈತನ್ಯವನ್ನು ಹೊಂದಿದೆ ಹಾಗಾಗಿ ಜೀವಿಗಳು ಭೂಮಿಯಲ್ಲಿ ಪರಿಸರವನ್ನೆ ಅವಲಂಬಿಸಿದೆ. ರಾಷ್ಟ್ರೀಯ ಪರಿಸರ ಕಾಳಜಿಯ ಪ್ರಕಾರ 1/3 ಅಂಶದಷ್ಟುಅರಣ್ಯ ಬೆಳೆಸಬೇಕಾಗಿದೆ. ಅಭಿವೃದ್ಧಿಯ ಜೊತೆಗೆ ಪರಿಸರಕ್ಕೆ ಹಾನಿ ಮಾಡದೆ ಮುಂದಿನ ತಲೆಮಾರಿಗೆ ನೀಡುವಂತೆ ಆಗಬೇಕು ಎಂದು ಮಕ್ಕಳಿಗೆ ಕರೆ ನೀಡಿದರು. ವೃಕ್ಷದ ಮೂಲವು ಆಧ್ಯಾತ್ಮ ದೃಷ್ಟಿಯಲ್ಲಿ ಮುಖ್ಯ ಸ್ಥಾನವನ್ನು ಪಡೆದಿದೆ. ಜೀವಿತದ ಆರಂಭ ಕೊನೆ ಎರಡಕ್ಕೂ, ಪರಿಸರವು ಗಿಡಮೂಲಿಕೆಗಳ ಮೂಲಕ ಪರಿಹಾರ ನೀಡಿದ ಪುರಾವೆಗಳಿವೆ. ಹಾಗಾಗಿ ಪಶ್ಚಿಮ ಘಟ್ಟವು ಔಷಧಿ ಸಸ್ಯಗಳನ್ನು ವಿಶೇಷ ಪ್ರಬೇಧವನ್ನು ಒಳಗೊಂಡಿದೆ. ಒಟ್ಟಿನಲ್ಲಿ ಕಾಡನ್ನು ಉಳಿಸಿ ಬೆಳೆಸಿ ಗಿಡಗಳ ಆರೈಕೆಯನ್ನು ಮಾಡಬೇಕೆಂದರು.
ಹಿಮವತಿ ಭಟ್ ಮಾತನಾಡಿ ಕಾಡನ್ನು, ಪರಿಸರವನ್ನು, ಪುಸ್ತಕದಲ್ಲಿ ಮಾತ್ರ ಓದದೇ ಕಾಡಿನ ಮಧ್ಯೆಯೇ ಅರ್ಥ ಮಾಡಿಕೊಳ್ಳಬೇಕು. ಗಿಡಮರಗಳ ಒಡನಾಟದಿಂದ ಅದೇ ನಮಗೆ ಜ್ಞಾನವನ್ನು ನೀಡುತ್ತದೆ. ಅರಣ್ಯ ಸಂಪನ್ಮೂಲಗಳು ಸ್ವಾಭಾವಿಕವಾಗಿ ಒದಗಬೇಕು ಹೊರತು ಆಕ್ರಮಿಸಿ ಪಡೆಯಬಾರದು ಎಂದರು.
ಕಳವೆ ಅವರು ಮಾತನಾಡಿ ಹನಿ ನೀರಿಗೂ ಸಸ್ಯಸಂಕುಲವೇ ಆಧಾರವಾಗಿದೆ. ಪರಿಸರದಲ್ಲಿ ವೈವಿದ್ಯಮಯ ಶಿಕ್ಷಣ ಸಿಗುತ್ತದೆ.ಮಳೆಯ ಅಭಾವ, ವನ್ಯಜೀವಿಗಳ ರಕ್ಷಣೆಗಾಗಿ ಹಸಿರಿನ ಉಳಿವು ಅತ್ಯಗತ್ಯವಿದೆ.ಸಕಾಲದಲ್ಲಿ ಮಳೆ-ಬೆಳೆ ಆಗಬೇಕಾದರೆ, ನೀರಿನ ಪೂರೈಕೆ ಆಗಲು ಹಸಿರಿನ ಸಮೃದ್ಧಿಯನ್ನು ರಕ್ಷಿಸಬೇಕು ಮತ್ತು ನದಿಗಳ ಮಹತ್ವವು ಬಹಳ ಮುಖ್ಯವಾಗಿದೆ. ವೇದಗಳಲ್ಲಿ ಹೇಳಿದ ನದಿ, ಸಸ್ಯಕುಲ ರಕ್ಷಣೆ ಕ್ರಮಗಳನ್ನೆಇಂದಿನ ವಿಜ್ಞಾನ ಹೇಳುತ್ತಿದೆ.ಅಂಕಗಳಿಗಿಂತ ಪರಿಸರದ ಬದುಕು ನಿರಾಳ, ಆರೋಗ್ಯ ಪೂರ್ಣವಾದುದು ಎಂದರು.ಜೊತೆಗೆ ಇಂಗುಗುಂಡಿಗಳನ್ನು ನಿರ್ಮಿಸಿ, ಅಂತರ್ಜಲವನ್ನು ಹೆಚ್ಚಿಸಿ ನೀರಿನ ಅಭಾವವನ್ನುಕಡಿಮೆ ಮಾಡಬೇಕೆಂದು ಹೇಳಿದರು.
ಶಾಲೆಯಲ್ಲಿ ಪ್ರತಿವರ್ಷ ಹೊಸ ಹೊಸ ತಳಿಗಳನ್ನು ನೆಟ್ಟು ಕಾಳಜಿಯಿಂದ ಬೆಳೆಸುತ್ತಾ ಬಂದಿದ್ದು, ಇಂದಿನ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಿ ನೆಲ-ಜಲದ ಜೊತೆಗೆ ಹಸಿರು ಉಸಿರಾಗಿಸುವುದು ನಮ್ಮೆಲ್ಲರ ಜವಾಬ್ಧಾರಿ ಆಗಿದೆ ಮತ್ತು ಪ್ರಕೃತಿಯಲ್ಲಿ ಬೆರೆಯುವಗುಣ ಮಕ್ಕಳಲ್ಲಿ ಬರಲಿ, ನಮ್ಮ ಜವಾಬ್ಧಾರಿ ಪರಿಸರದ ಜೊತೆಗೆ ಸಾಗಬೇಕು ಎಂದು ಎಸ್. ಎಲ್ ಭಟ್ ತಿಳಿಸಿದರು.
ಎನ್.ಎ.ಭಟ್ ಅತಿಥಿಗಳನ್ನು ಸ್ವಾಗತಿಸಿ,ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಸತಿ ಶಾಲೆ ಮತ್ತುಅರಣ್ಯ ಇಲಾಖೆ ಸಹಕಾರದಿಂದ ಗಿಡ ನೆಡುವ ಮತ್ತು ಬೀಜದುಂಡೆ ಬಿತ್ತುವ ಕೆಲಸ ನಡೆದಿರುವುದನ್ನು ಸ್ಮರಿಸಿದರು. ಹಾಗೂ ಅರಣ್ಯ ಇಲಾಖೆಯ ಸಹಕಾರ್ಯ ಸಿಬ್ಬಂದಿ ವರ್ಗದವರಿಗೆ ಕಿರು ಕಾಣಿಕೆಯನ್ನು ಶಾಲಾ ವತಿಯಿಂದ ನೀಡಿ ಗೌರವಿಸಲಾಯಿತು. ಸ್ವಪ್ನಜಾ ನಿರೂಪಣೆ ಮಾಡಿದರು. ಹಾಗೂ ಶ್ರೇಯಾ ವಂದನೆಗಳನ್ನು ಸಲ್ಲಿಸಿದರು.
ಶಾಲಾ ಕಾರ್ಯಕಾರಿ ನಿರ್ದೇಶಕಿ ವೀಣಾ ಭಟ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಗುರುದತ್ತಎಮ್.ಎಸ್. ಶಾಲಾ ಮಕ್ಕಳೊಂದಿಗೆ ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿ ವರ್ಗದವರುಗಿಡನೆಟ್ಟು ವನಮಹೋತ್ಸವವನ್ನುಆಚರಿಸಿದರು.