• first
  second
  third
  previous arrow
  next arrow
 • ಸಂಗೀತದ ಆಪ್ತತೆಯನ್ನು ಗಟ್ಟಿಗೊಳಿಸಿದ ಜನನಿ ಸಂಗೀತ ಉತ್ಸವ

  300x250 AD

  ಶಿರಸಿ : ಜನನಿ ಮ್ಯೂಸಿಕ್ ಸಂಸ್ಥೆಯು ಎರಡು ದಿನಗಳ ಕಾಲ ಏರ್ಪಡಿಸಿದ್ದ ಜನನಿ ಸಂಗೀತ ಉತ್ಸವ ಸಂಗೀತದ ಬಗೆಗಿನ ಆಪ್ತತೆಯನ್ನು ಇನ್ನಷ್ಟು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಯಿತು. ನಗರದ ಟಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಕಲಾವಿದರುಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಯಿತು. ಕಾರ್ಯಕ್ರಮವನ್ನು ಹಿರಿಯ ಪರ್ತಕರ್ತ ಅಶೋಕ ಹಾಸ್ಯಗಾರ ಉದ್ಘಾಟಿಸಿದರು. ಸಂಗೀತದ ನಾದದ ವಿಸ್ತಾರ ದನಿಯ ಪ್ರಸಾರ ಮಾತ್ರ ಅಲ್ಲ, ಅದು ಸೊಗಸು ಸಹ ಹೌದು ಎಂದರು. ಪರ್ತಕರ್ತ ಕೃಷ್ಣಮೂರ್ತಿ ಕೆರೆಗದ್ದೆ ಮಾತನಾಡಿ ಸಂಗೀತ ಇದೊಂದು ಅನುಭೂತಿ ಇದನ್ನು ಕೇಳುವ ಆನಂದಿಸುವ ಕ್ಷಣಗಳೆ ರೋಮಾಂಚನ ಸಂಗೀತ ಮನುಷ್ಯನನ್ನು ಉಲ್ಲಸಿತಗೊಳಿಸುತ್ತಲ್ಲದೆ ಮಾನಸಿಕ ಸಂಕಟವನ್ನು ದೂರಮಾಡುತ್ತದೆ. ಶಿಕ್ಷಕಿ ಸೀತಾ ಭಟ್ಟ ಮಾತನಾಡಿ ಸಂಗೀತ ತಪಸ್ಸು, ಯೋಗ ಜ್ಞಾನದಂತೆ ಸಂಗೀತವೂ ಸಹ ಸದೃಢ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಸಂಗೀತ ವಿಶ್ವ ಮಾನವ ತತ್ವದಡಿ ಸಮಾಜ ಕಟ್ಟಿಕೊಡಲು ಉತ್ತಮ ಸಾಧನ ಎಂದರು. ಸಂಗೀತದ ಮೂಲಕ ಯುವ ಪ್ರತಿಭೆಗಳ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ ಮಾಡುವ ಕಾಯಕವನ್ನು ಜನನಿ ಸಂಗೀತ ಸಂಸ್ಥೆ ಮಾಡುತ್ತಿದ್ದೆ ಎಂದರು. ಜನನಿ ಸಂಸ್ಥೆ ಮುಖ್ಯಸ್ಥ ದಿನೇಶ ಹೆಗಡೆ ಪ್ರಾಚಾರ್ಯೆ ರೇಖಾ ದಿನೇಶ ಉಪಸ್ಥಿತರಿದ್ದರು. ಗಿರಿಧರ ಕಬ್ನಳ್ಳಿ ನಿರೂಪಿಸಿದರು.

  ಶ್ರೀಮತಿ ರೇಖಾ ದಿನೇಶ ತಮ್ಮ ಗಾಯನ ಪ್ರಸ್ತುತಿಯಲ್ಲಿ ರಾಗ್‌ಮಿಯಾ ಮಿಲ್ಹಾರ್‌ನಲ್ಲಿ ವಿಲಂಬಿತ ಏಕತಾಲ್‌ದಲ್ಲಿ ಭಾಜತ ತತಬೀತತ ಎಂಬ ಖ್ಯಾಲ್ ನ್ನು ಪ್ರಸ್ತುತ ಪಡಿಸಿ ನಂತರ ದೃತ್ ತೀನ್‌ತಾಲ್‌ದಲ್ಲಿ ‘ಬೋಲೆರೇ ಪಪೀಹರಾ’ ಎಂಬ ಪ್ರಚಲಿತ ‘ಬಂದಿಶ್’ ನ್ನು ಕೊನೆಗೆ ಒಂದು ‘ತರಾನಾ’ ವನ್ನು ಪ್ರಸ್ತುತ ಪಡಿಸಿದರು. ನಂತರ ಶ್ರೀರಾಮನ ಕುರಿತಾಗಿ’ರಾಮಾ ರಘುರಾಮಾ’ ಎಂಬ ದಾಸರಪದವನ್ನು ಅತ್ಯಂತ ಮನೋಹರವಾಗಿ ಪ್ರಸ್ತುತ ಪಡಿಸಿ ಕೊನೆಯಲ್ಲಿ ರಾಗ್ ಭೈರವಿಯಲ್ಲಿ “ತಂಬೂರಿ ಮೀಟಿದವ” ದಾಸರಪದದೊಂದಿಗೆ ತಮ್ಮ ಗಾಯನ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಇವರಿಗೆ ತಬಲಾದಲ್ಲಿ ಡಾ. ಶ್ರೀಹರಿ ದಿಗ್ಗಾವಿ ಧಾರವಾಡ ಅಷ್ಟೇ ಸಮರ್ಥವಾಗಿ ಸಾಥ್ ನೀಡಿದರು. ಹಾರ‍್ಮೊನಿಯಂದಲ್ಲಿ ಭರತ ಹೆಗಡೆ ಹೆಬ್ಬಲಸು ಅವರೂ ಸಹ ಅತ್ಯಂತ ಮನೋಜ್ಞವಾಗಿ ಸಾಥ್ ನೀಡಿದರು.

  ಭಾನುವಾರ ಸಂಜೆ ಆಮಂತ್ರಿತ ಕಲಾವಿದರಾದ ಡಾ.ದತ್ತಾತ್ರೇಯ ವೆಲ್‌ನಕರ ಬೆಂಗಳೂರು ತಮ್ಮ ಗಾಯನ ಪ್ರಸ್ತುತಿಯಲ್ಲಿ ರಾಗ್ ಭಾಗೆತ್ರೀಯಲ್ಲಿ ವಿಲಂಬಿತ ಖ್ಯಾಲ್ ಮತ್ತು ದೃತ್ ಖ್ಯಾಲ್ ಜೊತೆಗೆ ‘ತರನಾ’ ವನ್ನು ಪ್ರಸ್ತುತ ಪಡಿಸಿದರು. ರಾಗ್ ಕಲಾವತಿಯಲ್ಲಿ ಒಂದು ಮಧ್ಯಲಯ ಮತ್ತು ದ್ರತ್ ಬಂದಿಶನ್ನು ಪ್ರಸ್ತುತಗೊಳಿಸಿ ಕೊನೆಯಲ್ಲಿ ಗುರುವಿನ ಗುಲಾಮನಾಗುವ ತನಕ ಎಂಬ ದಾಸರ ಪದವನ್ನು ಪ್ರಸ್ತುತಪಡಿಸಿದರು. ಇವರಿಗೆ ತಬಲಾದಲ್ಲಿ ಬೆಂಗಳೂರಿನವರೇ ಆದ ಯೋಗಿಶ್ ಭಟ್ ರವರು ತಬಲಾ ಸಹಕಾರವನ್ನು ನೀಡಿದರೆ, ಭರತ ಹೆಬ್ಬಲಸು ಅವರು ಸಂವಾದಿನಿಯಲ್ಲಿ ಸಾಥ್ ನೀಡಿದರು.

  300x250 AD

  ಸಂಸ್ಥೆಯ ಹಿರಿಯ ಕಲಾವಿದರುಗಳಾದ ಭೂಮಿ ದಿನೇಶ, ಸಂಪದಾ ವರುಣ, ಸ್ನೇಹಾ ಅಮ್ಮಿನಳ್ಳಿ, ಅಮೃತಾ, ಸನ್ಮತಿ, ಸ್ಪಂದನಾ, ಮಧುಶ್ರೀ ಶೇಟ್, ಜಾಗೃತ ಕೂರ್ಸೆ, ಮೈತ್ರೇಯಿ ಹೆಗಡೆ, ವಿವೇಕ ಆರ್.ಡಿ. ಭಾರ್ಗವಿ ವಸಂತ ಇವರ ಗಾಯನ ಕಾರ್ಯಕ್ರಮಕ್ಕೆ ತಬಲಾದಲ್ಲಿ ಕಿರಣ್ ಹೆಗಡೆ ಕಾನಗೋಡ,ವಿಜಯೇಂದ್ರ ಹೆಗಡೆ ಸಾಥ್ ನೀಡಿದರು.ಹಾರ‍್ಮೊನಿಯಂದಲ್ಲಿ ಅಜಯ ಹೆಗಡೆ ಅವರು ಸಹಕರಿಸಿದರು.

  Share This
  300x250 AD
  300x250 AD
  300x250 AD
  Back to top