ಗೋಕರ್ಣ: ಇಲ್ಲಿನ ಮಖ್ಯ ಕಡಲ ತೀರದಲ್ಲಿ ದುರ್ಗಾದೇವಿ ಮೂರ್ತಿಯೊಂದು ದೊರೆತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಸಿಗರು ನೀರಿನಲ್ಲಿ ಆಟವಾಡುವ ವೇಳೆ ಈ ಮೂರ್ತಿ ಕಾಲಿಗೆ ತಾಗಿದ್ದು, ತಕ್ಷಣ ಅದನ್ನು ದಡಕ್ಕೆ ತಂದಿದ್ದಾರೆ. ಈ ಮೂರ್ತಿಯ ಮೂಗಿಗೆ ಚಿನ್ನದ ಮೂಗುತಿ ಇದ್ದು, ಬಹು ಆಕರ್ಷಿತವಾದ ದೇವಿಯ ಮೂರ್ತಿಯನ್ನು ನೋಡಲು ಪ್ರವಾಸಿಗರು ಹಾಗೂ ಸ್ಥಳೀಯರು ಮುಗಿಬಿದ್ದಿದ್ದಾರೆ.
ಮೂರ್ತಿ ಭಿನ್ನವಾದಾಗ ನೂತನ ಮೂರ್ತಿಯನ್ನು ಪ್ರತಿಷ್ಠಾಪಿಸುವ ವೇಳೆ ಹಳೆಯದನ್ನು ಸಮುದ್ರದಲ್ಲಿ ವಿಸರ್ಜಿಸುವುದು ವಾಡಿಕೆಯಾಗಿದೆ. ಅದರಂತೆ ಯಾರೋ ಸಮುದ್ರದಲ್ಲಿ ವಿರ್ಸಜಿಸಿ ಹೋಗಿದ್ದು ಅದೇ ವಾಪಾಸ್ಸು ಬಂದಿದೆ ಎನ್ನಲಾಗುತ್ತಿದೆ. ಪಿ.ಐ ವಸಂತ ಆಚಾರಿ ಮತ್ತು ಪಿ.ಎಸ್.ಐ ಸುಧಾ ಅಘನಾಶಿನಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.