• Slide
    Slide
    Slide
    previous arrow
    next arrow
  • ಜು.9ಕ್ಕೆ ಎಂ.ಎ.ಹೆಗಡೆ‌ ದಂಟ್ಕಲ್ ಸಂಸ್ಮರಣ:ತಾಳಮದ್ದಲೆ, ಯಕ್ಷಗಾನ, ಕೃತಿ ಬಿಡುಗಡೆ:

    300x250 AD

    ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ಹಾಗೂ ದಿವಂಗತ ಎಂ.ಎ.ಹೆಗಡೆ ಸಂಸ್ಮರಣ‌ ಸಮಿತಿಯ ಸಂಯಕ್ತ ಆಶ್ರಯದಲ್ಲಿ ಪ್ರೋ ಎಂ. ಎ.ಹೆಗಡೆ ಸಂಸ್ಮರಣ ಕಾರ್ಯಕ್ರಮ ಜು‌.9ರ ಬೆಳಿಗ್ಗೆ 10ರಿಂದ ನಗರದ ಟಿಆರ್ ಸಿ ಸಭಾಂಗಣದಲ್ಲಿ ನಡೆಯಲಿದೆ.
    ಸೋಮವಾರ ನಗರದ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಸ್ಮರಣ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾಹಿತಿ ನೀಡಿ, ಅಂದು ಇಡೀ ವಿವಿಧ ಗೋಷ್ಟಿ, ತಾಳಮದ್ದಲೆ, ಅಪರೂಪದ ಗ್ರಂಥಗಳ ಲೋಕಾರ್ಪಣೆ, ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ ಎಂದರು.ಇದೆ ಸಂದರ್ಭದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
    ಬೆಳಿಗ್ಗೆ 10ಕ್ಕೆ ಎಂ.ಎ.ಹೆಗಡೆ ಅವರ ಯಕ್ಷಗಾನ ಪ್ರಸಂಗಗಳ ಕುರಿತ ಗೋಷ್ಠಿಯ ಅಧ್ಯಕ್ಷತೆಯನ್ನು ಅರ್ಥದಾರಿ ಎಂ.ಎನ್.ಹೆಗಡೆ ಹಲವಳ್ಳಿ ವಹಿಸುವರು. ಡಾ. ಕಬ್ಬಿನಾಲೆ ವಸಂತ ಭಾರದ್ವಜ ಅವರು ರಾಜಾಕರಂಧಮ ಕುರಿತು, ಪ್ರೊ. ಕೆ.ಈ.ರಾಧಾಕೃಷ್ಣ ಸೀತಾ ವಿಯೋಗದ ಕುರಿತು, ಡಾ. ಪಾದೆಕಲ್ಲು ವಿಷ್ಣು ಭಟ್ ಯಕ್ಷಗಾನ ‌ಕಿರು ಪ್ರಸಂಗದ‌ ಕುರಿತು ಮಾತನಾಡುವರು.
    ವೇದಾಂತ ಗ್ರಂಥಗಳು, ಕನ್ನಡ ಭಾಷಾಂತರ ಎಂಬ ಕುರಿತು ಎರಡನೇ ಗೋಷ್ಟಿಯ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ವಹಿಸಿಕೊಳ್ಳಲಿದ್ದಾರೆ. ಇಂಗ್ಲೀಶ್ ಕೃತಿಯ ಕುರಿತು ಡಾ. ಎಚ್.ಆರ್.ಅಮರನಾಥ ವೇದಾಂತ ಗ್ರಂಥಗಳ ಕುರಿತು, ಡಾ. ಮಹಾಬಲೇಶ್ವರ ಕಿರಕುಂಭತ್ತಿ ಮಾತನಾಡುವರು.
    ಮಧ್ಯಾನ್ಹ 2.30ರಿಂದ ಸೀತಾ ಪರಿತ್ಯಾಗ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ವಿ.ಗಣಪತಿ ಭಟ್ಟ, ಗಜಾನನ ಭಟ್ಟ ತುಳಗೇರಿ, ನರಸಿಂಹ ಭಟ್ಟ ಹಂಡ್ರಮನೆ, ವಿಘ್ನೇಶ್ವರ ಗೌಡ ಭಾಗವಹಿಸುವರು. ಅರ್ಥಗಾರಿಕೆಯಲ್ಲಿ ಮೋಹನ ಹೆಗಡೆ ಹೆರವಟ್ಟ, ದಿವಾಕರ ಹೆಗಡೆ ಕೆರೆಹೊಂಡ, ಗಣಪತಿ ಭಟ್ಟ ಸಂಕದಗುಂಡಿ ಪಾಲ್ಗೊಳ್ಳುವರು.
    ಸಂಜೆ 5ಕ್ಕೆ ಗ್ರಂಥಗಳ ಲೋಕಾರ್ಪಣೆ ನಡೆಯಲಿದ್ದು , ಎಂ.ಎ.ಹೆಗಡೆ ಸಂಪಾದಕತ್ವದ ಯಕ್ಷಗಾನ ಸ್ವರೂಪ ಮತ್ತು‌ ಲಕ್ಷಣ, ವೈಖರೀ ವಾಚಸ್ಪತಿ ಹಾಗೂ ದಿ.ಎಂ.ಎ.ಹೆಗಡೆ ಪ್ರಸಂಗ ಸಮುಚ್ಚಯ ಲೋಕಾರ್ಪಣೆ ಆಗಲಿದೆ.
    ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ ಸರಸ್ವತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಶಿವರಾಮ ಹೆಬ್ಬಾರ, ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ, ಪ್ರಸಿದ್ದ ಕಲಾವಿದ ಎಂ‌. ಪ್ರಭಾಕರ ಜೋಶಿ, ಆರ್.ಎಂ.ಹೆಗಡೆ‌ ಬಾಳೆಸರ, ಆರ್. ಎನ್. ಹೆಗಡೆ ಗೊರ್ಸಗದ್ದೆ, ಲಕ್ಷಣ ಗ್ರಂಥದ ಮೂಲ‌ನಿಧಿ ನೀಡಿದ ವಿ.ಆರ್.ಭಟ್ಟ ಮುಂಬಯಿ ಉಪಸ್ಥಿತರಿರುವರು.
    ನಂತರ ಎಂ.ಎ.ಹೆಗಡೆ ರಚಿತ ಸೀತಾ ವಿಯೋಗ ಯಕ್ಷಗಾನ ನಡೆಯಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ‌ ಹಿಲ್ಲೂರು, ಸತೀಶ ದಂಟಕಲ್, ಶಂಕರ ಭಾಗವತ್, ಪ್ರಸನ್ನ ಹೆಗ್ಗಾರ, ಮುಮ್ಮೇಳದಲ್ಲಿ ಕೆ.ಜಿ.ಮಂಜುನಾಥ, ಶ್ರೀಧರ ಚಪ್ಪರಮನೆ, ಉದಯ ಹೆಗಡೆ ಕಡಬಾಳ, ನಾಗರಾಜ ಕುಂಕಿಪಾಲ, ನಿರಂಜನ ಜಾಗನಳ್ಳಿ, ಸನ್ಮಯ ಭಟ್ಟ, ಸುಜಯ ನಾಯ್ಕ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
    ಈ ವೇಳೆ ಯಕ್ಷ ಶಾಲ್ಮಲಾದ ನಾಗರಾಜ್ ಜೋಶಿ ಸೋಂದಾ, ಟ್ರಸ್ಟಿಗಳಾದ ನಿರಂಜನ ಜಾಗನಳ್ಳಿ, ಜಿ.ಜಿ.ಹೆಗಡೆ ಕನೇನಳ್ಳಿ, ಭಾಸ್ಕರ ಹೆಗಡೆ ಇತರರು ಇದ್ದರು.

    ಮರೆಯಲಾಗದ, ಮರೆಯಲಾರದ ವ್ಯಕ್ತಿ. ಎಂ.ಎ.ಹೆಗಡೆ ಅವರು ಕನ್ನಡ, ಸಂಸ್ಕೃತಿಗೆ ಕೊಟ್ಟ ಕೊಡುಗೆ ಅನನ್ಯ. ಇವರು ಮರೆಯಬಾರದ ವ್ಯಕ್ತಿ. ಈ ಕಾರಣದಿಂದ ಈ‌ ಕಾರ್ಯಕ್ರಮ ಮಹತ್ವದ್ದು.

    300x250 AD
    • ವಿ. ಉಮಾಕಾಂತ ಭಟ್ಟ ವಿದ್ಯಾವಾಚಸ್ಪತಿ
    Share This
    300x250 AD
    300x250 AD
    300x250 AD
    Leaderboard Ad
    Back to top