ಶಿರಸಿ: ಇತ್ತೀಚಿಗೆ ನೀಡಿದ ಸಿಇಟಿ ಪರೀಕ್ಷೆಯಲ್ಲಿ ರಾಜ್ಯದ ಕೆಲವು ಸ್ಥಳಗಳಲ್ಲಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಜನಿವಾರ ತೆಗೆಯಲು ಸೂಚಿಸಿದ ಸಂಗತಿ ಖೇದಕರ. ಇದು ನಿಜಕ್ಕೂ ಖಂಡನಾರ್ಹ ಎಂದು ರಾಜದೀಪ ಟ್ರಸ್ಟ್ ಅಧ್ಯಕ್ಷ ದೀಪಕ್ ದೊಡ್ಡೂರು ಹೇಳಿದ್ದಾರೆ.
ಸಿಇಟಿ ಪರೀಕ್ಷೆ ವೇಳೆ ನಡೆದ ಘಟನೆಗೆ ಪ್ರತಿಕ್ರಯಿಸಿದ ಅವರು, ಕರ್ನಾಟಕ ಸರ್ಕಾರವು ಈಗಾಗಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಇದನ್ನು ಖಂಡಿಸಿರುವುದು ಸ್ವಾಗತರ್ಹ. ತಪ್ಪು ಮಾಡಿದವರ ಮೇಲೆ ಶೀಘ್ರದಲ್ಲಿ ಸೂಕ್ತ ಕ್ರಮ ತಿರುಗಿಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.
ನಾಡಿನ ಎಲ್ಲ ಧರ್ಮ- ಜಾತಿಗಳನ್ನು ಸಮಾನವಾಗಿ ಗೌರವಿಸುವ ಸರ್ಕಾರದ ಬದ್ಧತೆಗೆ ಚ್ಯುತಿ ತರಲು, ಯಾರೋ ದುರುದ್ದೇಶದಿಂದ ಮಾಡಿದ ಕೃತಿ ಇದು. ಇಂತಹ ಬೆಳವಣಿಗೆ ಇನ್ನುಮುಂದೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು.
ಜೊತೆಗೆ, ಇದೀಗ ತೊಂದರೆಗೆ ಈಡಾದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳ ಕುರಿತಂತೆ ಸೂಕ್ತ ಸಹಾಯ ಹಸ್ತ ನೀಡಬೇಕಾಗಿ ಸರ್ಕಾರಕ್ಕೆ ವಿನಂತಿಸಿದ್ದಾರೆ.