ಹೊನ್ನಾವರ : ತಾಲೂಕಿನ ಗದ್ದೆಮನೆ ಮತ್ತು ಮಂಡಲಕುರ್ವ ಗ್ರಾಮ ವ್ಯಾಪ್ತಿಯ ಒಕ್ಕಲಿಗರ ಸಂಘ ಮತ್ತು ಸಂಘದ ಕಚೇರಿಯ ಉದ್ಘಾಟನಾ ಸಮಾರಂಭ ರವಿವಾರ ನಡೆಯಿತು.
ತಾಲೂಕಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮಪ್ಪ ಗೋವಿಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಭೈರವಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಿ ಮಾದೇವ ಗೌಡರ ಸಂಘದ ಕಚೇರಿಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗದ್ದೆಮನೆ ಮತ್ತು ಮಂಡಲಕುರ್ವ ಒಕ್ಕಲಿಗರ ಸಂಘದ ಅಧ್ಯಕ್ಷ ಕೃಷ್ಣ ಪೇರಾ ಗೌಡ ವಹಿಸಿದ್ದರು.
ಈ ಸಂರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು, ಮತ್ತು ಗದ್ದೆಮನೆ ಮತ್ತು ಮಂಡಲಕುರ್ವ ಒಕ್ಕಲಿಗ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.