ಸಿದ್ದಾಪುರ: ದೇಶದ ಭದ್ರ ಬುನಾದಿಗೆ ನಾವು ಒಂದಾಗಬೇಕು. ಪ್ರೀತಿಯ ನೀತಿಯನ್ನು ನಾವು ಜಗತ್ತಿಗೆ ಸಾರಬೇಕು. ಇಂದು ದುಷ್ಟಕೂಟಗಳು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿವೆ. ನಮ್ಮ ಜನಸಂಖ್ಯೆ ಕ್ಷೀಣಿಸಿದರೆ ನಮಗೆ ಉಳಿಗಾಲವಿಲ್ಲ. ಸನಾತನ ಧರ್ಮದಲ್ಲಿ ನಾವೆಲ್ಲ ಒಂದು ಎಂಬ ಭಾವನೆ ನಿಮ್ಮಲ್ಲಿ ಇರಬೇಕು. ನಮ್ಮ ಚಿತ್ತ ದೇಶದ ಭವ್ಯ ಬುನಾದಿಯತ್ತ ಇರಬೇಕು. ಎಂದು ಸಾಮಾಜಿಕ ಧುರೀಣ ಉಪೇಂದ್ರ ಪೈ ಶಿರ್ಸಿ ಹೇಳಿದರು.
ಅವರು ತಾಲ್ಲೂಕಿನ ಬೈಲಳ್ಳಿಯಲ್ಲಿ ಶ್ರೀ ಮಹಾಕಾಲೇಶ್ವರ ಮತ್ತು ಶ್ರೀ ಗಣಪತಿ ಶ್ರೀ ಅಮ್ಮನವರ ನೂತನ ಆಲಯ ಮತ್ತು ಧ್ವಜ ಪ್ರತಿಷ್ಠೆ, ಗೋಪುರ ಕಲಶ ಪ್ರತಿಷ್ಠೆ ಮಹೋತ್ಸವ ಕೊನೆ ದಿನದ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯ ಕೆ.ಜಿ.ನಾಯ್ಕ ಹಣಜಿಬೈಲ್ ಮಾತನಾಡಿ ನಮ್ಮ ಧರ್ಮ ಎಲ್ಲ ಧರ್ಮಗಳಿಂತ ಮೊದಲೇ ಇತ್ತು. ನಮ್ಮ ಧರ್ಮ ಮೇಲೆ ಅನೇಕ ಬಾರಿ ದಬ್ಬಾಳಿಕೆ ಆಗಿದೆ. ಎಲ್ಲ ಜಾತಿಯವರು ನಾವೆಲ್ಲ ಒಂದು ಎಂದು ಭಾವಿಸುವಿಸಬೇಕು. ದೇವಸ್ಥಾನದ ನಿರ್ಮಾಣದಲ್ಲಿ ಒಂದಾದ ಹಾಗೇ ಧರ್ಮ ವಿಚಾರದಲ್ಲಿ ಒಂದಾಗಬೇಕು. ಸನಾತನ ಧರ್ಮ ಉಳಿಸುವ ಕಾರ್ಯ ನಮ್ಮಲ್ಲಿ ಆಗಬೇಕು ಎಂದು ಹೇಳಿದರು.
ಸಾಮಾಜಿಕ ಧುರೀಣ ಅನಂತಮೂರ್ತಿ ಹೆಗಡೆ ಮಾತನಾಡಿ ಜಾತಿಯತೆ ನಮ್ಮ ನಿಜವಾದ ಶತ್ರು. ರಾಜಕಾರಣಿಗಳು ನಮ್ಮಲ್ಲಿರುವ ವಿಕ್ನೇಸ್‌ನ್ನು ಬಳಸಿಕೊಂಡು ಒಡದಾಳುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಬಾಳಬೇಕು ಎಂದರು. ಶಶಿಭೂಷಣ ಹೆಗಡೆ ಮಾತನಾಡಿ ಸನಾತನ ಧರ್ಮ ದ ಮೇಲೆ ಎಷ್ಟೆಲ್ಲ ಆಕ್ರಮಣಗಳಾಗಿವೆ. ಆದರೂ ಧರ್ಮ ಆಳಿಯದೆ ಗಟ್ಟಿಯಾಗಿದೆ. ದೇವಸ್ಥಾನಗಳು ಸಾಮಾಜಿಕ, ಧಾರ್ಮಿಕ ಕಾರ್ಯಗಳ ಕೇಂದ್ರಗಳಾಗಬೇಕು. ಬೈಲಳ್ಳಿ ಜಾತ್ಯಾತೀತ ಊರು ಗಳಲ್ಲಿ ಒಂದಾಗಿದೆ ಎಂದರು.
ದೇವಸ್ಥಾನ ಕಟ್ಟಡ ಸಮಿತಿಯ ಅಧ್ಯಕ್ಷ ಗಂಗಾಧರ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರನ್ನು ಸ್ಮರಿಸಿದರು.
ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಎಮ್.ಕೆ., ವಕೀಲ ಜಿ.ಎಸ್. ಹೆಗಡೆ ಬೆಳ್ಳೆಮಡ್ಕಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ಊರಿನ ಸಹಕಾರಿ ಸತೀಶ್ ಹೆಗಡೆ, ಪಟ್ಟಣ ಪಂಚಾಯತ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಪಟ್ಟಣ ಪಂಚಾಯತ ಸದಸ್ಯ ರವಿ ನಾಯ್ಕ, ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ಮೊದಲಾದವರು ವೇದಿಕೆಯಲ್ಲಿದ್ದರು. ಗ್ರಾಮ ಪಂಚಾಯತಿ ಸದಸ್ಯ, ಕಮಿಟಿಯ ಕಾರ್ಯದರ್ಶಿ ಶ್ರೀಪಾದ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಾಂತ ಮಡಿವಾಳ ಸ್ವಾಗತಿಸಿದರು. ಕೆ.ಟಿ. ಮಡಿವಾಳ ನಿರೂಪಿಸಿದರು.