ಶಿರಸಿ: ತಾಲೂಕಿನ ದೊಡ್ನಳ್ಳಿಯಲ್ಲಿ ಜ. 23 ಹಾಗೂ 24 ರಂದು ಗ್ರಾಮದೇವರ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ದೈವಜ್ಞರ ನೇತೃತ್ವದಲ್ಲಿ ನಿಶ್ಚಯಿಸಲಾಗಿದೆ.
ಜ. 23 ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪಂಚಗವ್ಯ ಹವನ, ಮಾತೃಕಾ ಪೂಜೆ, ದೇವನಾಂದಿ, ಪುಣ್ಯಾಹವಾಚನ, ಮಧುಪರ್ಕ, ಋತ್ವಿಗ್ವರಣ, ದೇವಬಿಂಬ ಜಲಧಿವಾಸ ಕಾರ್ಯಕ್ರಮಗಳು ನಡೆಯಲಿವೆ. ಅದೇ ದಿನ ಸಾಯಂಕಾಲ ಸಪ್ತಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ, ವಾಸ್ತುಹೋಮ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ. 24 ರಂದು ಗ್ರಾಮ ದೇವರುಗಳಾದ ಹುಲಿಯಪ್ಪ, ಜಟ್ಟಿಗ, ಭೂತರಾಜ, ಬೇಟೇಬೀರ,ಯಕ್ಷಿಣಿ ದೇವರುಗಳ ಪ್ರತಿಷ್ಠೆ ನಡೆಯಲಿದೆ. ಅದೇ ದಿನ ಅನ್ನ ಸಂತರ್ಪಣೆ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ದೊಡ್ನಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಶಿರಸಿ ಸಿದ್ದಾಪುರ ವಿಧಾನಸಭೆಯ ಶಾಸಕರಾದ ಭೀಮಣ್ಣ .ಟಿ. ನಾಯ್ಕ ಉದ್ಘಾಟಿಸಲಿದ್ದಾರೆ.ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟಿನ ಸಂಸ್ಥಾಪಕರಾದ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ, ದೊಡ್ನಳ್ಳಿ ಗ್ರಾಮಪಂಚಾಯತ ಅಧ್ಯಕ್ಷರಾದ ತಿರುಮಲೇಶ್ವರ ಮಡಿವಾಳ, ಹೌಸಿಂಗ್ ಬೋರ್ಡ್ ಇಂಜಿನಿಯರ್ ಲಕ್ಷ್ಮೀನಾರಾಯಣ ಹೆಗಡೆ, ಖ್ಯಾತ ಉದ್ಯಮಿಗಳಾದ ಗಣೇಶ್ ಜೈವಂತ ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ. ಮಹೇಂದ್ರ ಭಟ್ ದೊಡ್ನಳ್ಳಿ, ರಘುಪತಿ ನಾಯ್ಕ ದೊಡ್ನಳ್ಳಿ, ಕೃಷ್ಣ ಹೆಗಡೆ ದೊಡ್ನಳ್ಳಿ, ಸುಧೀರ್ ದೇವಡಿಗ ಎಸಳೆ, ತಿಮ್ಮಪ್ಪ ನಾಯ್ಕ ಹುಸರಿ ಹಾಗೂ ದೊಡ್ನಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರೀತಿ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ಶ್ರೀ ಮಾರಿಕಾಂಬಾ ಮೆಲೋಡಿಸ್ ಶಿರಸಿ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಲಿದೆ.ಕಾರ್ಯಕ್ರಮದಲ್ಲಿ ಶಾಲಿನಿ ಮತ್ತು ಪೂರ್ವಿಕಾ ಶೇಟ್, ರೋಶನ್,ನೀಲಕಂಠ ಮತ್ತು ವಿನಾಯಕ ಶೇಟ್ ಗಾಯಕರಾಗಿ ಪಾಲ್ಗೊಳ್ಳಲಿದ್ದಾರೆ.
ಯಕ್ಷಗಾನ ಪ್ರದರ್ಶನ:
ಅದೇ ದಿನ ರಾತ್ರಿ 10 ಗಂಟೆಯಿಂದ ಶ್ರೀಪ್ರಭಾ ಸ್ಟುಡಿಯೋ ಶಿರಸಿ ಅವರ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರಿಂದ ಕವಿ ಧ್ವಜಪುರ ನಾಗಪ್ಪಯ್ಯ ವಿರಚಿತ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಶಂಕರ ಭಾಗವತ, ಗಣೇಶ ಗಾಂವ್ಕರ್ ಹಾಗೂ ಮುಮ್ಮೇಳದಲ್ಲಿ ಸರ್ವಶ್ರೀ ಅಶೋಕ ಭಟ್ಟ ಸಿದ್ಧಾಪುರ, ಶ್ರೀಧರ ಕಾಸರಕೋಡು, ಸದಾಶಿವ ಮಲವಳ್ಳಿ, ಶ್ರೀ ಪ್ರವೀಣ ತಟ್ಟೀಸರ,ಮಾರುತಿ ಬೈಲ್ಗದ್ದೆ ಭಾಗವಹಿಸಲಿದ್ದಾರೆ. ವಿಶೇಷ ಪಾತ್ರದಲ್ಲಿ ದೊಡ್ನಳ್ಳಿಯ ಕಲಾ ಪೋಷಕರಾದ ಎಸ್.ಎನ್.ಹೆಗಡೆ ದೊಡ್ನಳ್ಳಿ ಅಭಿನಯಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.